ಕಾಪು: ಕಾಪು ತಾಲೂಕು ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಆಯ್ಕೆ ಪ್ರಕ್ರಿಯೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಗ್ರಾಪಂಗಳ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಉಚ್ಚಿಲ ಶ್ರೀಮಹಾಲಕ್ಷ್ಮಿ ಸಭಾ ಭವನದಲ್ಲಿ ಗುರುವಾರ ನಡೆಯಿತು.
ಕಾಪು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 16 ಗ್ರಾಪಂಗಳ ಮೀಸಲಾತಿ ವಿವರ ಹೀಗಿದೆ: ಬೆಳ್ಳೆ- ಅಧ್ಯಕ್ಷ ಹಿಂದುಳಿದ ವರ್ಗ ಅ, ಉಪಾಧ್ಯಕ್ಷರು ಸಾಮಾನ್ಯ ಮಹಿಳೆ, ಕುರ್ಕಾಲು- ಅಧ್ಯಕ್ಷ ಸಾಮಾನ್ಯ,ಉಪಾಧ್ಯಕ್ಷ ಸಾಮಾನ್ಯ. ಶಿರ್ವ- ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷರು ಸಾಮಾನ್ಯ ಮಹಿಳೆ. ಇನ್ನಂಜೆ-ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಕಟಪಾಡಿ- ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ,ಉಪಾಧ್ಯಕ್ಷ ಸಾಮಾನ್ಯ. ಕೋಟೆ- ಹಿಂದುಳಿದ ವರ್ಗ ಅ,ಉಪಾಧ್ಯಕ್ಷರು ಸಾಮಾನ್ಯ ಮಹಿಳೆ. ಮಜೂರು- ಅಧ್ಯಕ್ಷ ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಹಿಂದುಳಿದ ವರ್ಗ ಅ. ಕುತ್ಯಾರು- ಅಧ್ಯಕ್ಷರು ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಮುದರಂಗಡಿ-ಅಧ್ಯಕ್ಷರು ಹಿಂದುಳಿದ ವರ್ಗ ಬ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಬೆಳಪು - ಅಧ್ಯಕ್ಷರು ಸಾಮಾನ್ಯ ಮಹಿಳೆ, ಉಪಾಧ್ಯಕ್ಷ : ಹಿಂದುಳಿದ ವರ್ಗ ಅ.
ಬಡಾ - ಅಧ್ಯಕ್ಷರು: ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷರು: ಹಿಂದುಳಿದ ವರ್ಗ ಅ ಮಹಿಳೆ.
ಎಲ್ಲೂರು - ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷರು: ಅನುಸೂಚಿತ ಜಾತಿ ಮಹಿಳೆ. ಪಲಿಮಾರು - ಅಧ್ಯಕ್ಷರು: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ರು: ಹಿಂದುಳಿದ ವರ್ಗ ಬ ಮಹಿಳೆ. ತೆಂಕ - ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷ : ಸಾಮಾನ್ಯ. ಪಡುಬಿದ್ರಿ - ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷರು : ಸಾಮಾನ್ಯ ಮಹಿಳೆ. ಹೆಜಮಾಡಿ - ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷರು: ಹಿಂದುಳಿದ ವರ್ಗ ಅ ಮಹಿಳೆ.
ಚುನಾವಣಾ ಆಯೋಗ ಗೊತ್ತುಪಡಿಸಿದ ಮೀಸಲಿನಂತೆ ಆನ್ಲೈನ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದೆ. ಮುಂದೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಅಧಿಕಾರಿಗಳನ್ನು ನೇಮಿಸಿ ಏಳು ದಿನ ಮುಂಚಿತವಾಗಿ ಗ್ರಾಪಂಗಳಿಗೆ ನೋಟಿಸ್ ನೀಡಲಾಗುವುದು.15 ದಿನಗಳ ಒಳಗೆ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಥಮವಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಐದು ಪರಿಶಿಷ್ಟ ಜಾತಿ ಮಹಿಳೆ ಮೀಸಲು ಬಂದ ಪರಿಣಾಮ ಅದೃಷ್ಟ ಚೀಟಿ ಎತ್ತುವ ಮೂಲಕ ಪ್ರಥಮವಾಗಿ ಬಡಾ ಗ್ರಾಪಂ ಅಧ್ಯಕ್ಷ ಮೀಸಲು ಪ್ರಕಟವಾಯಿತು.
ಬಹುಮತ ಇದ್ದು, ಬಿಜೆಪಿ ಬೆಂಬಲಿತರು ಅಧಿಕ ಸ್ಥಾನ ಪಡೆದಿದ್ದರೂ ಪರಿಶಿಷ್ಟ ಜಾತಿ ಮೀಸಲಾತಿಗೆ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್ಗೆ ಅನಾಯಾಸವಾಗಿ ಸ್ಥಾನ ಲಭಿಸಿದೆ.
Kshetra Samachara
21/01/2021 03:27 pm