ಮಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸಹಿತ 7 ಮಂದಿ ಹುರಿಯಾಳುಗಳು ಅಖಾಡದಲ್ಲಿದ್ದಾರೆ.
ಜ.10ರಿಂದ 12ರ ವರೆಗೆ ಆನ್‌ಲೈನ್ ಮೂಲಕ ಈ ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಸುಮಾರು 4 ಲಕ್ಷ ಸದಸ್ಯರನ್ನು ಯುವ ಕಾಂಗ್ರೆಸ್ ಹೊಂದಿದೆ.
ಎನ್.ಎ.ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪ್ಪಾಡ್, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ, ಮಾಧ್ಯಮ ಕೋ-ಆರ್ಡಿನೇಟರ್ ರಕ್ಷಾ ರಾಮಯ್ಯ, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ಸೇರಿದಂತೆ 7 ಮಂದಿ ಚುನಾವಣೆ ಕಣದಲ್ಲಿದ್ದಾರೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸಹಿತ ಸಮಿತಿಯು ಹೊಸದಿಲ್ಲಿಯಲ್ಲಿ ಸಂದರ್ಶನ ನಡೆಸಿದ್ದು, ಅಂತಿಮವಾಗಿ ಮಿಥುನ್ ರೈ ಸಹಿತ ಏಳು ಮಂದಿಯನ್ನು ಆಯ್ಕೆ ಮಾಡಿದೆ.
ಈಗಾಗಲೇ ಮಿಥುನ್ ರೈ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಯಾನ ಆರಂಭಿಸಿದ್ದಾರೆ.
Kshetra Samachara
07/01/2021 03:23 pm