ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಜೆಪಿಯವರು ಷಂಡರು, ನಕಲಿ ಹಿಂದುತ್ವವಾದಿಗಳು: ಹಿಂದೂ ಮಹಾಸಭಾ ವಾಗ್ದಾಳಿ!

ಉಡುಪಿ: ಬಿಜೆಪಿಯವರು ಷಂಡರು, ನಕಲಿ ಹಿಂದುತ್ವವಾದಿಗಳು. ಇವರಿಗೂ ಕಾಂಗ್ರೆಸಿಗರಿಗೂ ವ್ಯತ್ಯಾಸವೇ ಇಲ್ಲ. ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ ಮಾಡುವ ರಾಜ್ಯ ಸರಕಾರ ಒಂದು ಸರಕಾರವೇ? ಎಂದು ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ವಾಗ್ದಾಳಿ ಬಿಜೆಪಿ ವಿರುದ್ಧ ನಡೆಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ದೇವಸ್ಥಾನ ಕೆಡವಿದ ಹಿಂದೂ ವಿರೋಧಿ ಸರಕಾರ ರಾಜ್ಯದಲ್ಲಿದೆ.ಇವರಿಗೆ ದೇವಸ್ಥಾನದ ಮೇಲೆ ಏಕೆ ಕಣ್ಣು? ಇವರಿಗೇಕೆ ಚರ್ಚು ಮಸೀದಿ ಕಾಣಲ್ಲ? ಎಂಟು ನೂರು ವರ್ಷ ಇತಿಹಾಸ ಇದ್ದ ನಂಜನಗೂಡು ದೇವಸ್ಥಾನ ಒಡೆದಿದ್ದಾರೆ.ಇವರಿಗೇನು ನೈತಿಕತೆ ಇದೆ? ಪ್ರಮೋದ್ ಮುತಾಲಿಕ್ ಮೇಲೆ ಕೇಸು ಹಾಕ್ತಾರೆ.ಹಿಂದುತ್ವವಾದಿಗಳ ಬಾಯಿ ಮುಚ್ಚಿಸುತ್ತಾರೆ.ಮಾತೆ ಮಾತೆ ಹೇಳುವ ಪಕ್ಷದ ಹಾಲಪ್ಪ, ರೇಣುಕಾಚಾರ್ಯ, ರಘುಪತಿ ಭಟ್ ಏನು ಮಾಡಿದ್ದಾರೆ ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ.ಇವರಿಗೆ ಹಿಂದೂಗಳ ಬಗ್ಗೆ ಮಾತಾಡುವ ಯಾವ ನೈತಿಕತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Edited By : Shivu K
PublicNext

PublicNext

29/04/2022 07:19 pm

Cinque Terre

32.13 K

Cinque Terre

5

ಸಂಬಂಧಿತ ಸುದ್ದಿ