ಉಡುಪಿ: ಕರಾವಳಿಯಲ್ಲಿ ನಿರಂತರವಾಗಿ ಗೋ ಕಳ್ಳ ಸಾಗಣೆ ನಡೆಯುತ್ತಿದ್ದು , ತಲವಾರು ಹಿಡಿದು ಹಟ್ಟಿಗೆ ನುಗ್ಗಿ ಗೋಕಳ್ಳತನ ಮಾಡಲಾಗುತ್ತಿದೆ. ಗೋವು ಹತ್ಯೆ ವಿರುದ್ಧ ಗಂಗೊಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದೆವು. ಆದರೆ ಪ್ರತಿಭಟನೆಯ ಮರುದಿನವೇ ಮುಸಲ್ಮಾನರು ಮೀನು ಖರೀದಿಗೆ ಬಹಿಷ್ಕಾರ ಹಾಕಿದರು. ಹಿಂದೂಗಳ ಜೊತೆ ವ್ಯವಹಾರ ಮಾಡುವುದಿಲ್ಲ ಎಂದು ತೀರ್ಮಾನಿಸಿದರು. ಹಾಗಾಗಿ ಮುಸಲ್ಮಾನ ವ್ಯಾಪಾರಿಗಳ ಮಾನಸಿಕತೆ ಏನು ಎಂಬುದು ನಮಗೆ ಗೊತ್ತಾಗಿದೆ. ಬಹಿಷ್ಕಾರದ ನಡೆ ಆರಂಭವಾಗಿದ್ದೇ ಮುಸಲ್ಮಾನರಿಂದ ಹೊರತು ನಮ್ಮಲ್ಲಿ ಅಲ್ಲ ಎಂದು ಉಡುಪಿಯಲ್ಲಿ ಭಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್ ವಾಗ್ದಾಳಿ ನಡೆಸಿದ್ದಾರೆ.
PublicNext
23/03/2022 02:30 pm