ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಪ್ರಾರ್ಥನಾ ಮಂದಿರಕ್ಕೆ ಹೋಗಿ ಮಹಿಳೆಯರ ಮೇಲೆ ಹಲ್ಲೆ ನಡೆಸುವುದು ಖಂಡನೀಯ: ಕಾಂಗ್ರೆಸ್ ನಾಯಕಿ ಕಿಡಿ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪ್ರಾರ್ಥನಾ ಮಂದಿರಕ್ಕೆ ಹೋಗಿ ಮಹಿಳೆಯರು ಮತ್ತು ಭಕ್ತಾದಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ.ಇದು ಯಾವ ರೀತಿಯ ಹಿಂದೂ ಸಂಸ್ಸ್ಕೃತಿ ಎಂದು ಕಾಂಗ್ರೆಸ್ ನಾಯಕಿ, ಪ್ಯಾನಲಿಸ್ಟ್, ವೆರೋನಿಕಾ ಕರ್ನೇಲಿಯೋ ಹೇಳಿದ್ದಾರೆ.

ಉಡುಪಿ ಸುಶಿಕ್ಷಿತರ ಜಿಲ್ಲೆ, ಸೌಹಾರ್ದತೆಯ ಜಿಲ್ಲೆ.ಯಾರು ಯಾವ ದೇವರನ್ನು ಪೂಜಿಸಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.

ಪ್ರತಿಯೊಬ್ಬರಿಗೂ ಶಿಕ್ಷಣ ಇದೆ. ವಿಚಾರಗಳು ಗೊತ್ತಿವೆ.ಯಾವ ದೇವರನ್ನು ಪೂಜಿಸಬೇಕು ಎಂಬ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ.ಬಲವಂತದ ಮತಾಂತರ ಎಂಬುದು ಸುಳ್ಳು ಆರೋಪ ಎಂದು ಹೇಳಿದ್ದಾರೆ.

ಅಲ್ಲಿ ಮತಾಂತರ ನಡೆಯುತ್ತಿದೆ ಎಂದು ನಿಮಗೆ ಹೇಳಿದವರು ಯಾರು? ನಮ್ಮನ್ನು ಬಲವಂತವಾಗಿ ಕರೆತಂದಿದ್ದಾರೆ ಎಂದು ಯಾರಾದರೂ ಹೇಳಿದ್ದಾರಾ? ಎಂದು ಪ್ರಶ್ನಿಸಿರುವ ವೆರೋನಿಕಾ,ದೇಶದ ಸಂವಿಧಾನ ಗೌರವಿಸುವವರು ಪೊಲೀಸರಿಗೆ ದೂರು ಕೊಡಬೇಕಿತ್ತು.ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದಿತ್ತು.ಹಿಂದೂ ಸಂಸ್ಕೃತಿಯ ಬಗ್ಗೆ ಮಾತನಾಡುವವರು ಈ ರೀತಿ ಮಾಡಿದರೆ ಸರಿಯಲ್ಲ ಎಂದು ಹೇಳಿದ್ದಾರೆ.

ದಾಳಿ ನಡೆಸುವುದು ಯಾವ ರೀತಿಯ ಸಂಸ್ಕೃತಿ?ಉಸ್ತುವಾರಿ ಸಚಿವರ ತವರೂರಲ್ಲೇ ಈ ಘಟನೆ ನಡೆದಿದೆ.ಇದು ಜಿಲ್ಲೆಯ ಹಿಂದುಗಳು ಕೂಡಾ ತಲೆತಗ್ಗಿಸುವ ವಿಚಾರ.ಹಿಂದೂ ಜಾಗರಣ ವೇದಿಕೆಗೆ ಬೇಕಾದಷ್ಟು ಇತರ ವಿಚಾರಗಳಿವೆ.ಜಿಲ್ಲೆಯ ಜನರು ಕಷ್ಟದಲ್ಲಿದ್ದಾರೆ. ಅದಕ್ಕೆ ಸ್ಪಂದಿಸಿ.ಶಾಂತಿಯುತವಾಗಿ ಮನವೊಲಿಸುವ ಕೆಲಸ ಮಾಡಿ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

12/09/2021 12:47 pm

Cinque Terre

14.13 K

Cinque Terre

2

ಸಂಬಂಧಿತ ಸುದ್ದಿ