ಉಡುಪಿ: ಕರಾವಳಿಯಲ್ಲಿ ಉಗ್ರರ ಅಡ್ಡೆ ಆಗದಂತೆ ತಡೆಯಲು ಎನ್ ಐಎ ಕಚೇರಿ ನಿರ್ಮಾಣಕ್ಕೆ ಆಗ್ರಹಿಸಿ ಇವತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಿತು.ಉಡುಪಿಯ ಮಣಿಪಾಲದ ರಜತಾದ್ರಿ ಬಳಿ ಹಿಂಜಾವೇ ಕಾರ್ಯಕರ್ತರು
ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಕರಾವಳಿಯಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗುತ್ತಿವೆ.ಸಮುದ್ರ ತಟದಲ್ಲಿ ರಕ್ಷಣೆ ಭದ್ರಪಡಿಸಲು ವಿಶೇಷ ನೀತಿ ರಚಿಸಬೇಕು.ಲವ್ ಜಿಹಾದ್ ಮತ್ತು ಉಗ್ರಗಾಮಿ ಚಟುವಟಿಕೆಗಳಿಗೆ ನಿಕಟ ಸಂಪರ್ಕವಿದೆ. ಲವ್ ಜಿಹಾದ್ ಕೃತ್ಯ ತಡೆಗಟ್ಟಲು ಉತ್ತರಪ್ರದೇಶ ಮಾದರಿಯ ಕಾನೂನು ರಚನೆ ಮಾಡಬೇಕು.ಮತಾಂತರಗೊಂಡಿರುವ ಹಿಂದೂ ಯುವತಿಯರ ಸದ್ಯದ ಸ್ಥಿತಿಗತಿಗಳ ಬಗ್ಗೆ ತನಿಖೆ ನಡೆಸಬೇಕು.
ಉಗ್ರಗಾಮಿ ಚಟುವಟಿಕೆಗಳಿಗೆ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡುವವರ ಬಗ್ಗೆ ತನಿಖೆ ನಡೆಸಬೇಕು.ಮಂಗಳೂರಿನಲ್ಲಿ ಎನ್ಐಎ ತನಿಖಾ ಸಂಸ್ಥೆಯ ಕಚೇರಿ ತೆರೆಯಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.ಕೊನೆಗೆ ಅಪರ ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Kshetra Samachara
17/08/2021 01:23 pm