ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಧಾನಿ ಮೋದಿ ಮಂಗಳೂರು ಭೇಟಿ ನೆನಪಿಗೆ ವೃಕ್ಷ ನೆಟ್ಟ ಪರಿಸರ ಪ್ರೇಮಿ!

ಮಂಗಳೂರು: ಕಡಲ ನಗರಿ ಮಂಗಳೂರಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರನ್ನು ನೋಡಲೆಂದು ನಿನ್ನೆ ಜನಸಾಗರವೇ ಸೇರಿತ್ತು. 2ಲಕ್ಷಕ್ಕೂ ಅಧಿಕ ಮಂದಿ ಮೋದಿಯವರ ಅಭಿಮಾನದಿಂದ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಆಗಮಿಸಿದ್ದರು. ಆದರೆ ಮಂಗಳೂರಿನಲ್ಲೊಬ್ಬ ಪರಿಸರ ಪ್ರೇಮಿ ಮೋದಿಯವರು ಮಂಗಳೂರು ನಗರಕ್ಕೆ ಭೇಟಿ ನೀಡಿರುವ ನೆನಪಿಗಾಗಿ ವೃಕ್ಷವೊಂದನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದ್ದಾರೆ.

ಹೌದು... ಸ್ಮಶಾನಗಳಲ್ಲಿ, ರಸ್ತೆ ಬದಿಗಳಲ್ಲಿ, ಮೈದಾನಗಳ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಜೀತ್ ಮಿಲನ್ ರೋಚ್ ಅವರು ತಮ್ಮ ಪರಿಸರ ಕಾಳಜಿಯನ್ನು ವಿಶಿಷ್ಟವಾಗಿ ಮೆರೆದಿದ್ದಾರೆ‌. ಅವರು ಮೋದಿ ಮಂಗಳೂರು ಭೇಟಿಯ ದಿನವೇ ನಗರದ ಉರ್ವಸ್ಟೋರ್ ನಲ್ಲಿ ಅಶ್ವತ್ಥ ವೃಕ್ಷವೊಂದನ್ನು ನೆಟ್ಟಿದ್ದಾರೆ. ಈ ಮೂಲಕ ಮೋದಿಯವರ ನೆಪದಿಂದಲೇ ತಮ್ಮ ವೃಕ್ಷ ಪ್ರೀತಿಯನ್ನು ಮೆರೆದಿದ್ದಾರೆ.

ಯಾವುದಾದರೊಂದು ನೆಪದಲ್ಲಿ ಮರಗಳನ್ನು ನೆಟ್ಟು ಬೆಳೆಸಬೇಕೆನ್ನುವುದೇ ನನ್ನ ಉದ್ದೇಶ. ಅದಕ್ಕಾಗಿಯೇ ನಾನು ಮೋದಿಯವರು ಮಂಗಳೂರು ಭೇಟಿಯ ದಿನವನ್ನು ಹಸಿರಾಗಿಸಿ ನೆನಪಿನಲ್ಲಿ ಉಳಿಯುವಂತೆ ಮಾಡಲು ಈ ಗಿಡವನ್ನು ನೆಡಲಾಗಿದೆ ಎಂದು ಜೀತ್ ಮಿಲನ್ ರೋಚ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

03/09/2022 10:57 pm

Cinque Terre

36.76 K

Cinque Terre

2

ಸಂಬಂಧಿತ ಸುದ್ದಿ