ಬೈಂದೂರು: ಅಕಾಲಿಕ ಮಳೆ ಹಾಗೂ ಭಾರಿ ಸುಂಟರಗಾಳಿಯಿಂದಾಗಿ ಅಂಪಾರು, ಮೂಡುಬಗೆ ಭಾಗದ ಅನೇಕ ಮನೆಗಳಿಗೆ, ಕೃಷಿ ಭೂಮಿಗಳಿಗೆ ತೀವ್ರ ಹಾನಿ ಉಂಟಾಗಿದ್ದು, ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಸಂಕಷ್ಟಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಈ ಸಂದರ್ಭ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಹಾನಿಗೊಳಗಾದ ಮನೆಗಳಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೆಂಚುಗಳನ್ನು ವಿತರಿಸಲಾಯಿತು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಮಾಜಿ ಸದಸ್ಯೆ ಜ್ಯೋತಿ ನಾಯ್ಕ್, ಅಂಪಾರು ಗ್ರಾಪಂ ಸದಸ್ಯ ಕಿರಣ್ ಹೆಗ್ಡೆ, ಯುವ ಕಾಂಗ್ರೆಸ್ ಮುಖಂಡರಾದ ಉಮೇಶ್ ಕೊಠಾರಿ, ಉದಯ ಶೆಟ್ಟಿ, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
08/10/2021 10:35 pm