ಪಿತ್ರೋಡಿ: ಕೌಟುಂಬಿಕ ಕಲಹ, ರಾಜಕೀಯ ಆರೋಪ ಪ್ರತ್ಯಾರೋಪ ಜೋರಾದಾಗ ಆಣೆ ಪ್ರಮಾಣದ ಮಾತು ಬರುತ್ತದೆ. ಆದರೆ ಸ್ಥಳ ಪರಿಶೀಲನೆಗೆ ತೆರಳಿದ ಸರ್ಕಾರಿ ಅಧಿಕಾರಿಗಳಿಗೂ ಊರವರು ಸೇರಿ ಆಣೆ ಪ್ರಮಾಣ ಮಾಡಿಸಿದ ಘಟನೆ ಉಡುಪಿ ಜಿಲ್ಲೆಯ ಪಿತ್ರೋಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ಪಿತ್ರೋಡಿ ಪಾಪನಾಶಿನಿಯಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದ್ದವು. ಹೀಗಾಗಿ ಇಲ್ಲಿಗೆ ಸ್ಥಳ ಪರಿಶೀಲನೆ ನಡೆಸಲು ಮೀನುಗಾರಿಕಾ ಉಪ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ಮತ್ತು ತಂಡ ತೆರಳಿತ್ತು. ಸ್ಥಳೀಯವಾಗಿ ಕಾರ್ಯಾಚರಿಸುವ ಫಿಶ್ ಮಿಲ್ ಫ್ಯಾಕ್ಟರಿಗಳ ತ್ಯಾಜ್ಯದಿಂದಾಗಿ ಮೀನುಗಳು ಸಾವನ್ಬಪ್ಪುತ್ತಿವೆ ಎಂಬ ಆರೋಪ ಊರವರದ್ದು. ಆದರೆ ಫ್ಯಾಕ್ಟರಿಗಳ ಮಾಲೀಕರು ಪ್ರಭಾವಿಗಳು.ಹೀಗಾಗಿ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸುಳ್ಳು ವರದಿ ನೀಡಬಾರದು ಎಂದು ಅಧಿಕಾರಿಗಳಿಗೆ ಊರವರು ತೆಂಗಿನಕಾಯಿ ಮುಟ್ಟಿಸಿ ಆಣೆ ಪ್ರಮಾಣ ಮಾಡಿಸಿದ್ದಾರೆ. ಅಧಿಕಾರಿಗಳು ನಿಷ್ಪಕ್ಷಪಾತ ವರದಿ ಸಲ್ಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಹೇಗಿದೆ ಈ ಗ್ರಾಮಸ್ಥರ ಐಡಿಯಾ!
Kshetra Samachara
23/09/2021 03:20 pm