ಮುಲ್ಕಿ: ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಘಟನೆಯನ್ನು ಖಂಡಿಸಿ ಮೂಡಬಿದ್ರೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡಬಿದ್ರೆ ಕ್ಷೇತ್ರ ಸಮಿತಿ ವತಿಯಿಂದ ಮೊಂಬತ್ತಿ ಪ್ರದರ್ಶಿಸಿ ಪ್ರತಿಭಟಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ ಎಸ್.ಡಿ.ಪಿ.ಐ . ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿಯ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಮಾತನಾಡಿ, ಬೇಟಿ ಬಚಾವೋ ಎಂದು ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಸರ್ಕಾರದಡಿ ಹೆಣ್ಣುಮಕ್ಕಳಿಗೆ ಸ್ವಲ್ಪನೂ ರಕ್ಷಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಮೋದಿ ಮತ್ತು ಯೋಗಿ ಸರ್ಕಾರಗಳು ದಂಡಪಿಂಡ ಸರ್ಕಾರ ಎಂದು ಛೇಡಿಸಿದರು.
ಎಸ್.ಡಿ.ಪಿ.ಐ. ಮೂಡಬಿದ್ರೆ ವಲಯ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಂಡೇಲ್, ಪಿ.ಎಫ್.ಐ. ಮೂಡಬಿದ್ರೆ ವಲಯ ಸಮಿತಿ ಅಧ್ಯಕ್ಷ ನಾಸಿರ್ ಬೆಳುವಾಯಿ ಭಾಗವಹಿಸಿದ್ದರು. ಸಾಹುಲ್ ಹಮೀದ್ ಕಾಶಿಪಟ್ನ ನಿರೂಪಿಸಿ, ವಂದಿಸಿದರು.
Kshetra Samachara
05/10/2020 09:32 pm