ಮಂಗಳೂರು: ಪ್ರಧಾನಿ ಮೋದಿ ಸೆ.2ರಂದು ಸರ್ಕಾರದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆ ಮಂಗಳೂರಿಗೆ ಆಗಮಿಸುತ್ತಿದ್ದು, ಭದ್ರತೆಯ ಹಿನ್ನೆಲೆಯಲ್ಲಿ ಮತ್ತು ಜನರಿಗೆ ಸಮಸ್ಯೆ ಆಗದಂತೆ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ವಿವಿಧೆಡೆಯಿಂದ ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.
ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಸೆ.2ರಂದು ಬೆಳಗ್ಗೆ 6ರಿಂದ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಜಂಕ್ಷನ್ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಮಂಗಳೂರಿನ 9 ಕಡೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಂತೂರು ಸರ್ಕಲ್ ನಿಂದ ಬರುವ ವಾಹನಗಳು ಬಿಕರ್ನಕಟ್ಟೆ-ಕೈಕಂಬ ಜಂಕ್ಷನ್ ತೆರಳಲಿದೆ. ಉಡುಪಿಗೆ ಹೋಗಲು ಬಿಕರ್ನಕಟ್ಟೆಯಿಂದ ವಾಮಂಜೂರು- ಮೂಡುಬಿದಿರೆ- ಕಾರ್ಕಳ ರಸ್ತೆ ಬಳಸಬೇಕು. ಮೈಸೂರು, ಮಡಿಕೇರಿ ತೆರಳಲು ಬಿಕರ್ನಕಟ್ಟೆ- ಪಡೀಲ್-ಪುತ್ತೂರು-ಸುಳ್ಯದ ಮೂಲಕ ಹೋಗಬೇಕು. ಬೆಂಗಳೂರಿಗೆ ತೆರಳುವವರು ಬಿಕರ್ನಕಟ್ಟೆ-ಪಡೀಲ್-ಬಿ.ಸಿ.ರೋಡ್-ಉಪ್ಪಿನಂಗಡಿ ಮೂಲಕ ರಸ್ತೆ ಮೂಲಕ ಸಾಗಬೇಕು.
ಕಾಸರಗೋಡಿಗೆ ಹೋಗುವವರು ಪಡೀಲ್ - ಪಂಪ್ ವೆಲ್ - ತೊಕ್ಕೊಟ್ಟು ಮೂಲಕ ಹೋಗಬಹುದು. ಪೊರ್ಕೋಡಿ ಜಂಕ್ಷನ್ ನಿಂದ ಜೋಕಟ್ಟೆ-ಕಾನಾ-ಸುರತ್ಕಲ್ ಹಾಗೂ ಏರ್ಪೋರ್ಟ್ ನಿಂದ ಕೈಕಂಬ-ಗುರುಪುರ ಮೂಲಕ ಮಂಗಳೂರಿಗೆ ತೆರಳಬಹುದು. ಮುಲ್ಕಿ ಜಂಕ್ಷನ್ ನಿಂದ ಕಿನ್ನಿಗೋಳಿ-ಕಟೀಲು-ಬಜಪೆ-ಕೈಕಂಬ ಮೂಲಕ ಮಂಗಳೂರಿಗೆ ಬರಬಹುದು. ಲೇಡಿಹಿಲ್ ಮೂಲಕ ಪಿವಿಎಸ್-ಬಂಟ್ಸ್ ಹಾಸ್ಟೆಲ್ ಮೂಲಕ ಪಂಪ್ ವೆಲ್ಗೆ ವಾಹನ ಸಂಚಾರ ಇದೆ.
ಅಲ್ಲದೇ ಪ್ರಧಾನಿಯವರ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್ಗೆ 15 ಕಡೆಗಳಲ್ಲಿ ಪೊಲೀಸ್ ಇಲಾಖೆ ಸ್ಥಳ ಗುರುತಿಸಿದೆ ಆ ವಿವರಗಳು ಕೆಳಗಿನಂತಿದೆ.
1) ಡೆಲ್ಟಾ ಗ್ರೌಂಡ್: ಪೊಲೀಸ್ ಪಾಸ್ ಪಡೆದ ವಿವಿಐಪಿ 300 ಕಾರುಗಳ ಪಾರ್ಕಿಂಗ್
2) ಸೋಮಯಾಜಿ ಮೈದಾನ ಕೂಳೂರು: ಪೊಲೀಸ್ ಪಾಸ್ ಪಡೆದ 500 ವಿಐಪಿ ಕಾರುಗಳ ಪಾರ್ಕಿಂಗ್
3) ತಣ್ಣೀರು ಬಾವಿ ರಸ್ತೆ ಹಾಗೂ ಪಣಂಬೂರು: ಉಡುಪಿ, ಸುರತ್ಕಲ್, ಕಾವೂರು ಕಡೆಯಿಂದ ಬರುವ ವಾಹನಗಳು- 1500 ಬಸ್ 500 ಕಾರುಗಳು
4) ಎನ್ಎಂಪಿಎ ಮೈದಾನ, ಪಣಂಬೂರು: ಬಜಪೆ, ಕಾವೂರು ಹಾಗೂ ಉಡುಪಿ ವಾಹನಗಳು - 200 ಬಸ್, 600 ಬೈಕ್ಗಳು
5) ಎಂ.ಎಸ್.ಇ.ಝಡ್ ರಸ್ತೆ, ಪಣಂಬೂರು: ಉಡುಪಿ, ಸುರತ್ಕಲ್ ಕಡೆಯ ವಾಹನಗಳು - 1000 ಲಘು ವಾಹನಗಳು
6) ಎ.ಜೆ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜು, ಕೂಳೂರು ಪಂಜಿಮೊಗರು: ಪೊಲೀಸ್ ಪಾಸ್ ಪಡೆದ ವಿಐಪಿ ವಾಹನಗಳ ಪಾರ್ಕಿಂಗ್ 100 ಕಾರುಗಳು
7) ಗೋಲ್ಡ್ ಪಿಂಚ್ ಮೈದಾನದ ಪೂರ್ವ ಭಾಗದ ಅಮೆಜಾನ್ ಗೋಡಾನ್ ಹತ್ತಿರ: ಎಲ್ಲಾ ಭಾಗದ ವಾಹನ ಪಾರ್ಕಿಂಗ್- 2000 ಕಾರುಗಳು ಮತ್ತು 3000 ಬೈಕ್ಸ್
8) ಎ.ಜೆ. ಆಸ್ಪತ್ರೆ ಬಳಿಯ ಕುಂಟಿಕಾನದಿಂದ ಕಾವೂರು ಜಂಕ್ಷನ್: ಬೆಳ್ತಂಗಡಿ ಹಾಗೂ ಕಾಸರಗೋಡು ಕಡೆಯ - 350 ಬಸ್ಗಳು
9) ಕೆಪಿಟಿ ಮೈದಾನ: ಮೂಡುಬಿದಿರೆ, ಮುಲ್ಕಿ ತಾಲೂಕಿನ - 200 ಬಸ್ಗಳು
10) ವ್ಯಾಸ ನಗರ ಮೈದಾನ: ಪುತ್ತೂರು ಮತ್ತು ಸುಳ್ಯ ತಾಲೂಕಿನ - 50 ಬಸ್ಗಳು
11) ಪದುವಾ ಮೈದಾನ: ಪುತ್ತೂರು ಮತ್ತು ಸುಳ್ಯ ತಾಲೂಕಿನ - 250 ಬಸ್ಗಳು
12) ಕರಾವಳಿ ಉತ್ಸವ ಮೈದಾನ: ಮಂಗಳೂರು ನಗರ ವ್ಯಾಪ್ತಿಯಿಂದ ಆಗಮಿಸುವ 250 ಬಸ್ಗಳು
13) ಉರ್ವ ಮಾರುಕಟ್ಟೆ ಮೈದಾನ: ಉಳ್ಳಾಲ ತಾಲೂಕು ವ್ಯಾಪ್ತಿಯಿಂದ ಬರುವ 100 ಬಸ್ಗಳು
14) ಲೇಡಿಹಿಲ್ ಪೊಂಪೈ ಚರ್ಚ್: ಉಳ್ಳಾಲ ತಾಲೂಕು ವ್ಯಾಪ್ತಿಯಿಂದ ಬರುವ 100 ಬಸ್ಗಳು
15) ಉರ್ವಸ್ಟೋರ್ ಮೈದಾನದಿಂದ ಇನ್ಫೋಸಿಸ್ ಹಿಂಭಾಗದ ಕುಂಟಿಕಾನ ರಸ್ತೆಯವರೆಗೆ: ಬಂಟ್ವಾಳ ತಾಲ್ಲೂಕು ವ್ಯಾಪ್ತಿಯಿಂದ ಬರುವ 300 ಬಸ್ಗಳು
Kshetra Samachara
31/08/2022 05:32 pm