ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ವಿರುದ್ಧ ಪೊಲೀಸ್ ಠಾಣೆಗೆ ದೂರು ವಿಚಾರದಲ್ಲಿ ದ.ಕ ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಪಿ.ಆರ್.ಶೆಟ್ಟಿ ಹೇಳಿಕೆ ನೀಡಿದ್ದಾರೆ.
ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ದ.ಕ ಜಿಲ್ಲಾ ಕಂಬಳ ಸಮಿತಿ ರಚನೆಯಾಗಿದೆ.ಯಾವುದೇ ನಿರ್ಧಾರವನ್ನ ಜಿಲ್ಲಾ ಕಂಬಳ ಸಮಿತಿಯೇ ತೆಗೆದುಕೊಳ್ಳುತ್ತದೆ.ಆದರೆ ಗುಣಪಾಲ ಕಡಂಬ ಕಂಬಳ ಅಕಾಡೆಮಿ ಮೂಲಕ ಮಾಡ್ತಾ ಇದ್ದಾರೆ.ಕಂಬಳ ಸಮಿತಿ ನಿಯಮದ ಪ್ರಕಾರ ಎಲ್ಲವನ್ನೂ ಮಾಡಬೇಕು. ಈ ಬಗ್ಗೆ ನಮ್ಮ ಸಮಿತಿ ಆಜೀವ ಸದಸ್ಯ ಲೋಕೇಶ್ ಶೆಟ್ಟಿಗೆ ಬೇಸರವಿದೆ.ಆಜೀವ ಸದಸ್ಯ ಲೋಕೇಶ್ ಶೆಟ್ಟಿ ನೀಡಿದ ಪೊಲೀಸ್ ದೂರಿನ ಬಗ್ಗೆ ನೋಡಬೇಕು.
ಸ್ಕೈ ವೀವ್ ತಂತ್ರಜ್ಞಾನ ಮಾಡಿದ್ರೆ ಒಳ್ಳೆಯದು,ಶ್ರೀನಿವಾಸ ಗೌಡ ಒಳ್ಳೆಯ ಹುಡುಗ, ಆವಾಗಲೇ ಇವನು ಬಲಿಪಶು ಆಗ್ತಾನೆ ಅಂತ ಗೊತ್ತಿತ್ತು? ಸಾಕಷ್ಟು ಜನ ಕಂಬಳದಲ್ಲಿ ಒಳ್ಳೆಯ ಓಟಗಾರರು ಇದ್ದಾರೆ.ಒಬ್ಬನನ್ನೇ ಈ ರೀತಿ ಮಾಡಿದಾಗ ಕೆಲವರಿಗೆ ಬೇಸರ ಇದೆ.ತನಿಖೆ ಅನ್ನೋದಕ್ಕಿಂತ ಎಲ್ಲರೂ ಸೇರಿ ಕೂತು ಸಮಸ್ಯೆ ಸರಿ ಮಾಡಬೇಕಿದೆ.
ಕಂಬಳದ ಮಾಲೀಕರು, ಸದಸ್ಯರು ಎಲ್ಲರೂ ಸೇರಿ ನಾವು ಸಮಸ್ಯೆ ಸರಿ ಮಾಡ್ತೇವೆ.ಗುಣಪಾಲ ಕಡಂಬ ಅಕಾಡೆಮಿ ಮಾಡಿದಾಗ ನಾನೂ ಕೂಡ ಹಣ ಕೊಟ್ಟಿದ್ದೇನೆ. ಹಲವು ಕಂಬಳದ ಯಜಮಾನರು,ಸದಸ್ಯರು ಹಣ ಕೊಟ್ಟಿದ್ದಾರೆ.ಹೀಗಿರುವಾಗ ಅವರು ಇದನ್ನ ಸರಿಯಾಗಿ ಮಾಡಬೇಕಿತ್ತು ಅನ್ನೋ ಆಶಯ ಇತ್ತು.ನಾವೆಲ್ಲ ಕಂಬಳದ ಹಿರಿಯರು ಕೂತು ಮುಂದೆ ಚರ್ಚಿಸಿ ಸರಿ ಮಾಡ್ತೇವೆ ಎಂದರು.
Kshetra Samachara
20/07/2022 03:22 pm