ಉಡುಪಿ: ದ.ಕ ಜಿಲ್ಲೆಯ ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆ ಅತ್ಯಂತ ದುರದೃಷ್ಟಕರ.ನಿನ್ನೆ ಸಿಎಂ ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ. ಸಿಎಂ 25 ಲಕ್ಷ ರೂ ನೀಡಿರುವುದು ಒಪ್ಪಲಾಗದು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಣಿಪಾಲದಲ್ಲಿ ಮಾತನಾಡಿದ ಅವರು ,ಬಿಜೆಪಿಗರು ಕಾರ್ಯಕರ್ತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೆ ಪ್ರವೀಣ್ ಹತ್ಯೆ ಆಗುತ್ತಿರಲಿಲ್ಲ.ತಾನು ದುಡಿದು ಪೋಷಕರ ಪೋಷಣೆಯ ಜೊತೆಗೆ ಬಿಜೆಪಿಗೆ ನಿಷ್ಠೆಯಿಂದ ದುಡಿಯುತ್ತಿದ್ದ
ಪ್ರವೀಣ್ ಗೆ ಒಂದು ಸ್ವಂತ ಮನೆ ಇಲ್ಲ.ನಾಯಕರು, ಕಾರ್ಯಕರ್ತರ ಕಷ್ಟವನ್ನು ಅರಿತಿದ್ದರೆ ಪ್ರವೀಣ್‌ಗೆ ಆಶ್ರಯ ಸಿಗುತ್ತಿತ್ತು.3-4 ಪೀಳಿಗೆಗೆ ಆಗುವಷ್ಟು ಬಿಜೆಪಿಯ ಎಲ್ಲರೂ ಮಾಡಿಟ್ಟಿದ್ದಾರೆ.ಇದಕ್ಕೆ ನಾನು ಬಿಜೆಪಿಗೆ ಧಿಕ್ಕಾರ ಎನ್ನುತ್ತಿದ್ದೇನೆ ಎಂದರು.
ಕಾರ್ಯಕರ್ತರ ಆಕ್ರೋಶ ಶವಯಾತ್ರೆಯ ದಿನ ಸ್ಫೋಟವಾಗಿದೆ ಎಂದ ಅವರು, ರಾಜಿನಾಮೆ ಕೊಟ್ಟ ಎಲ್ಲರಿಗೂ ನನ್ನ ಅಭಿನಂದನೆಗಳು. ರಾಜೀನಾಮೆ ಕೊಟ್ಟವರು ನಿಜವಾದ ಹಿಂದುವಾದಿಗಳು.ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯಬಾರದು ಎಂದರು.
ಸುರತ್ಕಲ್ ನಲ್ಲಿ ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ಗೊತ್ತಿಲ್ಲ. ಕ್ರಿಯೆಗೆ ಪ್ರತಿಕ್ರಿಯೆಯಾಗಬಾರದು. ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟಿಗೆ ಸೇರಿ ಇದನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.
Kshetra Samachara
29/07/2022 11:53 am