ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೀಸ್ತಾ ಸೆಟಲ್ವಾಡ್ , ಝುಬೈರ್, ಶ್ರೀಕುಮಾರ್ ಬಂಧನ ವಿರೋಧಿಸಿ ಎಸ್ ಡಿಪಿಐನಿಂದ ಪ್ರತಿಭಟನೆ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಪ್ರಬಲವಾಗುತ್ತಿದ್ದು, ತನ್ನ ಕರಾಳವಾದ ನಿಜ ಸ್ವರೂಪದಲ್ಲಿ ನಮ್ಮೆದುರು ನಿಂತಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಹೇಳಿದರು.

ತೀಸ್ತಾ ಸೆಟಲ್ವಾಡ್, ಮುಹಮ್ಮದ್ ಝುಬೈರ್, ಆರ್ ಬಿ ಶ್ರೀಕುಮಾರ್ ರವರನ್ನು ಬಂಧನದ ವಿರುದ್ಧ ಎಸ್ ಡಿಪಿಐನಿಂದ ನಗರದ ಕ್ಲಾಕ್ ಟವರ್ ಮುಂಭಾಗ ನಡೆದಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಇಂದು ಮೊಟ್ಟ ಮೊದಲ ಬಾರಿಗೆ ಜನಸಾಮಾನ್ಯರಿಗೆ ಹೋಗಲು ಎಲ್ಲೂ ದಾರಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಮಾತನಾಡಿ, ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್, ಮುಹಮ್ಮದ್ ಜುಬೈರ್ ಬಂಧನ ಕ್ರೌರ್ಯತೆಯ ಮತ್ತೊಂದು ರೂಪ. ಸಂಘ ಪರಿವಾರದವರು ಅಮಾಯಕರನ್ನು ನಡುಬೀದಿಯಲ್ಲಿ ಕೊಲೆಗೈಯುತ್ತಾರೋ ಅದಕ್ಕಿಂತ ಭೀಕರವಾದ ಕುಕೃತ್ಯ ಇದಾಗಿದೆ.

ಹೋರಾಟಗಾರನ ಧ್ವನಿಯನ್ನು ಅಡಗಿಸುವ, ಹೋರಾಟವನ್ನು ಕೊನೆಗಾಣಿಸುವ ಯತ್ನವನ್ನು ನಮ್ಮಿಂದ ನಿಲ್ಲಿಸಲು ಸಾಧ್ಯವಿಲ್ಲ. ಬಿಜೆಪಿಯ ಷಡ್ಯಂತರಗಳನ್ನು ತಡೆಯಲು ಎಸ್ ಡಿಪಿಐ ಸಜ್ಜಾಗಿದೆ. ಜೊತೆಗೆ ನಿಮ್ಮ ಇಷ್ಟದಂತೆ ಈ ದೇಶವನ್ನು ನಡೆಸಲು ನಾವು ಬಿಡುವುದಿಲ್ಲ ಎಂದು ಹೇಳಿದರು.

Edited By : Somashekar
Kshetra Samachara

Kshetra Samachara

29/06/2022 10:41 pm

Cinque Terre

20.78 K

Cinque Terre

8

ಸಂಬಂಧಿತ ಸುದ್ದಿ