ಕುಂದಾಪುರ: ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ. ಕೋಟ ಮತ್ತು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯೋಗದಲ್ಲಿ ಇವತ್ತು ಕಾಲ್ನಡಿಗೆ ಜಾಥಾ ನಡೆಯಿತು.
ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ತೆಕ್ಕಟ್ಟೆಯವರೆಗೆ ಭಾರತಕ್ಕಾಗಿ ಕಾಲ್ನಡಿಗೆ ಜಾಥಾ ನಡೆಯಿತು.ಈ ವೇಳೆ ದೇಶಪ್ರೇಮವನ್ನು ಸಾರುವ ಮತ್ತು ದೇಶದ ಸೈನಿಕರನ್ನು ಕೊಂಡಾಡುವ ಸ್ಲೋಗನ್‌ಗಳು ಮತ್ತು ಹಾಡುಗಳು ಜಾಥಾಕ್ಕೆ ದೇಶಭಕ್ತಿಯ ಕಳೆ ತಂದವು.
ಕಾಂಗ್ರೆಸ್ ನ ಸ್ಥಳೀಯ ಮುಖಂಡರು ,ಕಾರ್ಯಕರ್ತರು ಭಾಗಿಯಾದರು.
Kshetra Samachara
08/08/2022 01:31 pm