ಉಡುಪಿ: ಜಿಹಾದ್ ಹಿಂಸಾಚಾರ ದೇಶದೆಲ್ಲೆಡೆ ಹಬ್ಬುತ್ತಿದೆ. ಮುಸ್ಲಿಂ ರಾಷ್ಟ್ರಗಳು ಇದರಿಂದ ವಿಮುಖರಾಗುತ್ತಿರುವಾಗ ಭಾರತದಲ್ಲಿ ಇದು ಎಲ್ಲೆಡೆ ಹಬ್ಬುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಣಿಪಾಲದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಬೆಳ್ಳಾರೆ, ಪ್ರವೀಣ್ ಕೊಲೆಗೆ ಸಂಬಂಧಿಸಿ ಪೊಲೀಸರಿಗೆ ಮುಕ್ತ ಅವಕಾಶ ನೀಡಿದ್ದೇವೆ. ಪ್ರಾಥಮಿಕ ವರದಿ ಪಡೆದಿದ್ದೇನೆ. ಈ ಕೃತ್ಯದ ಹಿಂದೆ ಕೈವಾಡ ಇರುವ ಎಲ್ಲರ ಸುಳಿವು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಎಡಿಜಿಪಿ ಇಲ್ಲೇ ಮೊಕ್ಕಾಂ ಹೂಡಿದ್ದಾರೆ ಎಂದ ಅವರು, ಸಿಸಿಟಿವಿ ಫೂಟೇಜ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುತ್ತಾರೆ. ಹಣಕಾಸು ನೆರವು ಮಾಡಿದವರು ಯಾರು ಎಂದು ಪತ್ತೆಮಾಡಿ ನಿಜವಾದ ಕೊಲೆಗಾರರನ್ನು ಬಯಲಿಗೆಳೆಯುತ್ತಾರೆ. ಯಾವುದೇ ಹತ್ಯೆಯನ್ನು ನಾವು ಸಮರ್ಥಿಸುವುದಿಲ್ಲ ಎಂದ ಅವರು ವೈಚಾರಿಕ ವಿಷಯಗಳು ಚರ್ಚೆ ಮೂಲಕ ಆಗಬೇಕೇ ವಿನಃ ಹಿಂಸಾ ರೂಪದಲ್ಲಿ ಯಾವುದೇ ಕೃತ್ಯ ನಡೆಯಬಾರದು ಎಂದಿದ್ದಾರೆ.
Kshetra Samachara
01/08/2022 06:42 pm