ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಕುಂಜೆ: ಕೈಗಾರಿಕೆಗಳಿಗೆ ಭೂಸ್ವಾಧೀನ ವಿರೋಧಿಸಿ ಹೋರಾಟ ನಿರಂತರ: ಮಿಥುನ್ ರೈ

ಮುಲ್ಕಿ: ಸರಕಾರವು ಬಳ್ಕುಂಜೆ, ಉಳೆಪಾಡಿ ಕೊಲ್ಲೂರು ಗ್ರಾಮಗಳ ಸುಮಾರು 1091 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗಾಗಿ ಭೂಸ್ವಾಧೀನ ಪಡಿಸುವುದನ್ನು ವಿರೋಧಿಸಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಳ್ಕುಂಜೆ ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಮುಖ್ಯ ಭಾಷಣಕಾರರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ ಸರಕಾರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿ ಕೈಗಾರಿಕೆಗಳನ್ನು ಸ್ಥಾಪಿಸಲು ಹುನ್ನಾರ ನಡೆಸುತ್ತಿದೆ, ಇದರಲ್ಲಿ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕೂಡ ಶಾಮಿಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಶಾಸಕರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಾ ಗ್ರಾಮಸ್ಥರೊಡನೆ ನಾಟಕ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅವರದ್ದೇ ಸರಕಾರವಿದ್ದು ಕೈಗಾರಿಕೆಗಳನ್ನು ಓಡಿಸಲು ಆಗದಿದ್ದರೆ ಶಾಸಕರಾಗಲು ನಾಲಾಯಕ್ಕು, ಇದು ಹೋರಾಟ ಬಿಜೆಪಿ ವಿರುದ್ಧ ಅಲ್ಲ ಬಳ್ಕುಂಜೆಯ ಪವಿತ್ರ ಕೃಷಿ ಮಣ್ಣನ್ನು ಉಳಿಸಲು ಎಂದು ಹೇಳಿದ ಅವರು ಶಾಸಕರು ಅಧಿವೇಶನದಲ್ಲಿ ಮಾತನಾಡುತ್ತಾರೆ ಎಂದು ಬೆಣ್ಣೆ ಸವರುತ್ತಿದ್ದಾರೆ, ತಾಕತ್ತಿದ್ದರೆ ಶಾಸಕರು ಕೆಐಡಿಬಿ ಅಧಿಕಾರಿಗಳಿಗೆ ಭೂಸ್ವಾಧೀನ ಮಾಡಬೇಡಿ ಎಂದು ಸೂಚನೆ ನೀಡಿ ಕೃಷಿ ಭೂಮಿ ಸ್ವಾಧೀನದ ವಿರುದ್ಧ ಹೋರಾಟಕ್ಕೆ ಕೈಜೋಡಿಸಲಿ ಹಾಗೂ ಬಳ್ಕುಂಜೆ ಪರಿಸರದಲ್ಲಿ ಐಟಿ ಕಂಪನಿ ಸ್ಥಾಪಿಸಿ ಯುವಕರಿಗೆ ಉದ್ಯೋಗ ದೊರಕಿಸಿಕೊಡಲಿ ಎಂದು ಸವಾಲೆಸೆದರು.

ಕೆ ಐ ಎ ಡಿ ಬಿ ಅಧಿಕಾರಿಗಳು ಭೂಸ್ವಾಧೀನ ನಡೆಸಲು ಗ್ರಾಮಸ್ಥರಿಗೆ ಕಿರುಕುಳ ನೀಡುವ ಬಗ್ಗೆ ಎಚ್ಚರಿಸಿದ ಅವರು ಕಾಂಗ್ರೆಸ್ ಪಕ್ಷ ಸಂತ್ರಸ್ತರೊಡನೆ ಕೈಜೋಡಿಸಲಿದೆ ಹಾಗೂ ಕೃಷಿಭೂಮಿ ಉಳಿಸಲು ಹೋರಾಟ ನಿರಂತರವಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ಫಾ.ಗಿಲ್ಬರ್ಟ್ ಡಿಸೋಜಾ, ಕಾಂತಾ ಬಾರೆ ಬೂತ ಬಾರೆ ಜನ್ಮ ಕ್ಷೇತ್ರದ ಗಂಗಾಧರ ಪೂಜಾರಿ, ಬಿಎಸ್ ಹುಸೇನ್ ಜೋಕಟ್ಟೆ, ದೀಪಕ್ ಪೆ, ರಾಜೇಶ್ ಕಡಲ ಕೆರೆ ಮಾತನಾಡಿದರು.

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್,ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾಡ್, ಯುವ ಕಾಂಗ್ರೆಸ್ ಪಕ್ಷದ ಅಶೋಕ್ ಪೂಜಾರ, ಪ್ರಜಾ ಪ್ರತಿನಿಧಿ ಪಕ್ಷದ ನೆಲ್ಸನ್ ಬಳ್ಕುಂಜೆ,ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಕೃಷಿ ಭೂಮಿಯನ್ನು ಕೈಗಾರಿಕೆಗೆ ಬಿಟ್ಟುಕೊಡವು, ಶಾಸಕರೇ ನಿಮ್ಮ ನಾಟಕ ನಿಲ್ಲಿಸಿ, ಹೈನುಗಾರಿಕೆ ನಮ್ಮ ಜೀವನಧಾರ, ಫಲವತ್ತಾದ ಕೃಷಿ ಭೂಮಿಯನ್ನು ಭೂ ಸ್ವಾಧೀನ ಮಾಡುತ್ತಿರುವ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳು ಕೇಳಿ ಬಂದವು.

ಅಹಿತಕರ ಘಟನೆಗಳು ನಡೆಯದಂತೆ ಮಂಗಳೂರು ಡಿಸಿಪಿ ಅಂಶು ಕುಮಾರ್, ಎಸಿಪಿ ಮಹೇಶ್ ಕುಮಾರ್ ಹಾಗೂ ಮುಲ್ಕಿ ಇನ್ಸ್ಪೆಕ್ಟರ್ ಕುಸುಮಾಧರ್ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.

Edited By : Somashekar
Kshetra Samachara

Kshetra Samachara

03/07/2022 09:01 pm

Cinque Terre

9.21 K

Cinque Terre

0

ಸಂಬಂಧಿತ ಸುದ್ದಿ