ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್
ಬೈಂದೂರು: ಪಬ್ಲಿಕ್ ನೆಕ್ಸ್ಟ್ ಬುಧವಾರ ಪ್ರಸಾರ ಮಾಡಿದ "ಸೌಲಭ್ಯ ವಂಚಿತ, ಕಾಡು ಆವೃತ ಕಾಲ್ತೋಡು; ಇನ್ನೆಷ್ಟು ಜೀವ ಬಲಿಯಾಗಬೇಕು?" ಎಂಬ ತನಿಖಾ ವರದಿಗೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸ್ಪಂದಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯಕ್ಕೆ ವಿಷಾದ ವ್ಯಕ್ತಪಡಿಸಿದ ಸುಕುಮಾರ್ ಶೆಟ್ಟಿ, ತಕ್ಷಣವೇ 11 ಲಕ್ಷ ರೂ. ವೆಚ್ಚದಲ್ಲಿ ವಾಟೆಮನೆ ಎಂಬಲ್ಲಿ ಕಾಲುಸಂಕ ನಿರ್ಮಿಸಲಾಗುವುದು ಎಂದಿದ್ದಾರೆ. ಅಲ್ಲದೆ, ಹೊಳೆಯ ಎರಡೂ ಬದಿಯ ಖಾಸಗಿ ಜಾಗದ ಮಾಲೀಕರಿಂದ ಜಾಗದ ದಾನಪತ್ರ ಪಡೆದು ವೆಂಟೆಡ್ ಡ್ಯಾಂ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನ್ಯಾಯಬೆಲೆ ಅಂಗಡಿಯನ್ನೂ ಶೀಘ್ರದಲ್ಲಿಯೇ ತೆರೆಯಲು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಲಾಗುವುದು ಎಂದಿದ್ದಾರೆ. ರಸ್ತೆ ಅಭಿವೃದ್ಧಿ ಹಾಗೂ ಟ್ರಾನ್ಸ್ ಫಾರ್ಮರ್ ವಿಚಾರದಲ್ಲಿಯೂ ಕ್ರಮ ಕೈಗೊಳ್ಳುವುದಾಗಿ ಶಾಸಕರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
ಶಾಸಕರ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿಯದೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ಎನ್ನುವುದೇ ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
18/08/2022 12:38 pm