ಉಡುಪಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಇಂದು "ಭಾರತಕ್ಕಾಗಿ ನಡಿಗೆ" ಕಾಲ್ನಡಿಗೆ ಜಾಥಾ ನಡೆಯಿತು. ಸ್ವಾತಂತ್ರ್ಯ 75ನೇ ವರ್ಷದ 'ಭಾರತಕ್ಕಾಗಿ ನಡಿಗೆ' ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು.ಸ್ವಾತಂತ್ರ್ಯ ಸಂಗ್ರಾಮದ ವೀರ-ಯೋಧರ ತ್ಯಾಗ, ಬಲಿದಾನ ಮತ್ತು ಶಾಂತಿ, ಸಾಮರಸ್ಯ ಹಾಗೂ ದೇಶಪ್ರೇಮದ ಸಂದೇಶವನ್ನು ಜಾಥಾದಲ್ಲಿ ಸಾರಲಾಯಿತು.
ಕಾಲ್ನಡಿಗಯು ಕನ್ನಾರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಿಂದ ಪ್ರಾರಂಭವಾಗಿ ಕಿನಿಮುಲ್ಕಿ ಮುಖ್ಯದ್ವಾರದ ಮೂಲಕ ಸಾಗಿ ಉಡುಪಿ ಜೋಡುರಸ್ತೆಯ ಮುಖಾಂತರ ಕೋರ್ಟ್ ರೋಡ್, ಸರ್ವಿಸ್ ಬಸ್ ನಿಲ್ದಾಣ, ಕಿದಿಯೂರು ಹೋಟೆಲ್, ಸಿಟಿ ಬಸ್ಸು ನಿಲ್ದಾಣ, ಕಲ್ಸಂಕದ ಮೂಲಕ ಇಂದ್ರಾಳಿ ಬಸ್ಸು ನಿಲ್ದಾಣ ಬಳಿ ಸಮಾರೋಪ ಸಭೆ ನಡೆಯಿತು.ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.
Kshetra Samachara
06/08/2022 01:56 pm