ಮುಲ್ಕಿ: ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರವನ್ನು ಶೀಘ್ರ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ "ಆರೋಗ್ಯ ರಕ್ಷ ಸಮಿತಿ ಸಭೆ" ಯಲ್ಲಿ ಅವರು ಮಾತನಾಡಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೃಷ್ಣ ಸರಕಾರಿ ಆಸ್ಪತ್ರೆಯ ಕೊರತೆಗಳ ಬಗ್ಗೆ ಶಾಸಕರಿಗೆ ಮನವಿ ಮಾಡಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರ ಸಹಿತ 38 ಸಿಬ್ಬಂದಿಗಳ ಕೊರತೆ, ಎದುರುಗಡೆ ನೂತನ ಬಸ್ಸು ತಂಗುದಾಣ, ಶವಗಾರ ಮೇಲ್ದರ್ಜೆಗೇರಿಸುವ ಜೊತೆಗೆ ರಸ್ತೆ ಕಾಂಕ್ರಿಟೀಕರಣ, ಆಸ್ಪತ್ರೆಯ ಆರು ಎಕರೆ ಜಾಗವನ್ನು ಕೆಲವರು ಅತಿಕ್ರಮಿಸಲು ಹುನ್ನಾರ ನಡೆಸುತ್ತಿದ್ದು ಸೂಕ್ತ ಆವರಣಗೋಡೆ, ಆಸ್ಪತ್ರೆಗೆ ಸುಸಜ್ಜಿತ ಎಲೆಕ್ಟ್ರಿಕಲ್ ಕಾಮಗಾರಿ ಬಗ್ಗೆ ಮನವಿ ಸಲ್ಲಿಸಿದರು.
ಇದಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಆಸ್ಪತ್ರೆಗೆ ಈಗಾಗಲೇ ಎಂಆರ್ ಪಿಎಲ್ ಅನುದಾನದಲ್ಲಿ ಒಂದು ಕೋಟಿ ವೆಚ್ಚದ ಒಪಿಡಿ ಬ್ಲಾಕ್, ಕೋವಿಡ್ ಸಮಯದಲ್ಲಿ ಆಕ್ಸಿಜನ್ ಘಟಕ, ನೂತನ ಆ್ಯಂಬುಲೆನ್ಸ್ ಒದಗಿಸಿದ್ದು, ಡಯಾಲಿಸಿಸ್ ಘಟಕ ಶೀಘ್ರ ಆರಂಭಿಸಲಾಗುವುದು ಮುಂದಿನ ದಿನಗಳಲ್ಲಿ ಮುಲ್ಕಿಯಲ್ಲಿ ತಾಲೂಕು ಆಡಳಿತ ಸೌಧ ನಿರ್ಮಾಣದ ಜೊತೆಗೆ ಆಸ್ಪತ್ರೆಯನ್ನು ತಾಲೂಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಈ ಸಂದರ್ಭ ಮುಲ್ಕಿ ನಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಸದಸ್ಯ ನರಸಿಂಹ ಪೂಜಾರಿ, ಬಿಜೆಪಿ ಹಿರಿಯ ಪ್ರಕೋಷ್ಠದ ಸಹ ಸಂಚಾಲಕ ಸಾಧು ಅಂಚನ್, ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಸಿಬ್ಬಂದಿ ಶಾಂತಿ ನಿರೂಪಿಸಿದರು.
Kshetra Samachara
28/06/2022 05:48 pm