ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಅಮೃತಾಮಾಯಿ ನಗರದ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಶಾಸಕ ಉಮಾನಾಥ ಕೋಟ್ಯಾನ್ ವಿತರಿಸಿದರು.
ಈ ಸಂದರ್ಭ ಅವರು ಮಾತನಾಡಿ ಸರಕಾರ ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುವುದರ ಜೊತೆಗೆ ಅನೇಕ ಸವಲತ್ತುಗಳನ್ನು ಒದಗಿಸುತ್ತಿದ್ದು ಅಂಬೇಡ್ಕರ್ ರಂತಹ ಮಹಾನ್ ನಾಯಕರ 131ನೇ ಜಯಂತಿಯ ದಿನದಂದು 33 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಈ ಭಾಗದಲ್ಲಿ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ವಿಪಕ್ಷ ನಾಯಕಿ ವಿಮಲ ಪೂಜಾರಿ,ತಹಶಿಲ್ದಾರ್ ಗುರುಪ್ರಸಾದ್, ಮುಖ್ಯಾಧಿಕಾರಿ ಚಂದ್ರಪೂಜಾರಿ, ಅಮೃತಾಮಯಿನಗರ ಭೀಮರಾವ್ ಯುವ ವೇದಿಕೆ ಅಧ್ಯಕ್ಷ ಸುಧಾಕರ್, ವಿಶುಕುಮಾರ್, ಕಂದಾಯ ಅಧಿಕಾರಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣ ನಿರೂಪಿಸಿದರು.
Kshetra Samachara
14/04/2022 04:58 pm