ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಗುಂಡಿ ತೋಡಿ ಮಣ್ಣಿನಡಿಯಲ್ಲಿ ಮಲಗಿ ಟೋಲ್ ವಿರುದ್ಧ ಪ್ರತಿಭಟನೆ

ಸುರತ್ಕಲ್: ಸುರತ್ಕಲ್, ಎನ್ಐಟಿಕೆ ಅಕ್ರಮ ಟೋಲ್ ಗೇಟು ಸ್ಥಗಿತಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಆಸಿಫ್ ಆಪತ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯು ಶನಿವಾರ ಆರನೇ ದಿನಕ್ಕೆ ಕಾಲಿರಿಸಿದೆ.

ಪ್ರತಿಭಟನೆಯಲ್ಲಿ ಆಸೀಫ್ ಆಪದ್ಬಾಂಧವ ಮಾತನಾಡಿ ಸುರತ್ಕಲ್ ಎನ್ಐಟಿಕೆ ಟೋಲ್ ಮುಚ್ಚುವವರೆಗೆ ಹೋರಾಟ ಅನಿವಾರ್ಯ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಹೋರಾಟ ಅಲ್ಲ; ಪ್ರತಿಭಟನೆಗೆ ರಾಜಕೀಯ ಎಳೆದುತಂದು ಅಗತ್ಯವಿಲ್ಲ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನಡುವೆ ಆಪದ್ಬಾಂಧವ ಆಸೀಫ್ ವಿಶೇಷವಾಗಿ ಧರಣಿ ವೇದಿಕೆಯ ಮುಂದೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಗುಂಡಿ ತೋಡಿ ಮಣ್ಣಿನೊಳಗೆ ಮಲಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಸಾರ್ವಜನಿಕರ ಗಮನ ಸೆಳೆದರು.

ಸುರತ್ಕಲ್, ಕಾಟಿಪಳ್ಳ ವಲಯ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದ ಮುಖಂಡರು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

Edited By : Manjunath H D
Kshetra Samachara

Kshetra Samachara

12/02/2022 08:25 pm

Cinque Terre

7.67 K

Cinque Terre

12

ಸಂಬಂಧಿತ ಸುದ್ದಿ