ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ದಾರಿದೀಪ ಅವ್ಯವಸ್ಥೆ: ಜಗ್ಗದ ನಗರಸಭೆ: ನೂರು ದೊಂದಿ ಉರಿಸಿ ಪ್ರತಿಭಟನೆ!

ಉಡುಪಿ: ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಾರಿದೀಪ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನ ತಲುಪಿದೆ.ಆದರೂ ನಗರಸಭೆ ಇನ್ನೂ ಎಚ್ಚೆತ್ತುಕೊಂಡಿಲ್ಲ.ಪ್ರತಿಭಟನೆಯ ಭಾಗವಾಗಿ ಕರ್ನಾಟಕ ರಕ್ಷಣಾ ವೇದಿಕೆ, ನಿನ್ನೆ ರಾತ್ರಿ ನೂರು ದೊಂದಿಗಳನ್ನು ಉರಿಸಿ ಪ್ರತಿಭಟಿಸಿತು.ಈ ವೇಳೆ ಕಾರ್ಯಕರ್ತರು ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇಂದು ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಸಂಘಟನೆಯ ನೂರು ಕಾರ್ಯಕರ್ತರೊಂದಿಗೆ ದೊಂದಿಗಳನ್ನು ಹೊತ್ತಿಸಿ ಕರಾವಳಿ ಬೈಪಾಸ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆಯನ್ನು ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಉಡುಪಿ ತಾಲೂಕು ಅಧ್ಯಕ್ಷರಾದ ಸುಧೀರ್ ಪೂಜಾರಿ, ಮತ್ತಾಕ್ ಅಲಿ, ರಿತೇಶ್, ಶಾಹಿಲ್ ರಹಮತುಲ್ಲಾ, ರಾಹುಲ್ ಪಿಂಟೋ, ಸುಹೇಲ್ ಉದ್ಯಾವರ, ಮನೋಜ್, ಧನಂಜಯ್ ಪುತ್ತೂರು ಮಂಜು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

03/02/2022 12:33 pm

Cinque Terre

12.03 K

Cinque Terre

0

ಸಂಬಂಧಿತ ಸುದ್ದಿ