ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಹೋರಾಟಕ್ಕೆ ಬೆಂಬಲ

ಮುಲ್ಕಿ:ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ನೀತಿಯನ್ನು ವಿರೋಧಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಯಲಿದ್ದು ಮುಲ್ಕಿ ಉಪ ವಿಭಾಗ ವ್ಯಾಪ್ತಿಯ ಮೆಸ್ಕಾಂನ ಅಧಿಕಾರಿ ಮತ್ತು ನೌಕರರ ಪೂರ್ವ ಭಾವಿ ಸಭೆ ಮುಲ್ಕಿ ಮೆಸ್ಕಾಂ ಕಚೇರಿ ಆವರಣದಲ್ಲಿ ನಡೆಯಿತು

ಮುಲ್ಕಿ ಮೆಸ್ಕಾಂ ಉಪ ವಿಭಾಗದ ಅಧಿಕಾರಿ ರಾಮಕೃಷ್ಣ ಐತಾಳ ಮಾತನಾಡಿ ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ಉಗ್ರ ಹೋರಾಟ ಅಗತ್ಯವಾಗಿದ್ದು ಎಲ್ಲರ ಬೆಂಬಲ ಅಗತ್ಯ. 2021ರ ವಿದ್ಯುತ್ ಕಾಯ್ದೆ ತಿದ್ದುಪಡಿ, ಕಂಟೆಂಟ್ ಮತ್ತು ಕ್ಯಾರೇಜ್ ಪದ್ಧತಿ ಕಾರ್ಮಿಕರಿಗೆ ಮತ್ತು ಗ್ರಾಹಕರಿಗೆ ಹಾನಿಕಾರಿಯಾಗಿದೆ, ಕೂಡಲೇ ಮೆಸ್ಕಾಂ ಖಾಲಿ ಹುದ್ದೆಗಳ ಭರ್ತಿ ಯಾಗಬೇಕು ಎಂದರು

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ 659 ಇದರ ಸಹಕಾರ್ಯದರ್ಶಿ ಆದಂತ ಎಚ್ ಎಸ್ ಗುರುಮೂರ್ತಿ ಮಾತನಾಡಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ಮತ್ತು ಹೊರಗುತ್ತಿಗೆ ಬೇಡ, ಕೂಡಲೇ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಗುತ್ತಿಗೆ ನೌಕರರನ್ನು ಖಾಯಂ ಗೊಳಿಸಬೇಕು, ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದರು. ವಿದ್ಯುತ್ ಕಾಯ್ದೆ 2003ರ ತಿದ್ದುಪಡಿಯನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸೋಣ ಎಂದರು.

ಬಳಿಕ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು , ಸಂಘಟನಾ ಕಾರ್ಯದರ್ಶಿ ರಾಜೇಶ್ ಬಿ , ಸಿಇಸಿ ಸುಧಾಕರ ಪಿ ಮತ್ತು ಷಣ್ಮುಖಪ್ಪ ಹಾಗೂ ಡಿಪ್ಲೊಮಾ ಅಸೋಸಿಯೇಷನ್ನನ ಸಿಇಸಿ ಚಂದ್ರಹಾಸ್, ಮತ್ತು ಮುಲ್ಕಿ ಉಪ ವಿಭಾಗ ವ್ಯಾಪ್ತಿಯ ಎಲ್ಲಾ ಅಧಿಕಾರಿ ಮತ್ತು ನೌಕರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Edited By : Nagaraj Tulugeri
Kshetra Samachara

Kshetra Samachara

04/08/2021 02:51 pm

Cinque Terre

13.93 K

Cinque Terre

3

ಸಂಬಂಧಿತ ಸುದ್ದಿ