ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಅರಣ್ಯ ನಾಶ ,ಪರಿಶಿಷ್ಟ ಪಂಗಡದ ಹಣ ದುರುಪಯೋಗ ಆರೋಪ: ದಸಂಸದಿಂದ ಪ್ರತಿಭಟನೆ

ಬ್ರಹ್ಮಾವರ: ಅರಣ್ಯ ನಾಶ ಮಾಡಿದ್ದಲ್ಲದೆ ಪರಿಶಿಷ್ಟ ಪಂಗಡದ ಹಣ ದುರುಪಯೋಗ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅರ್ ಟಿ ಐ ಕಾರ್ಯಕರ್ತರು ಹಾಗೂ ದಲಿತ ಸಂಘರ್ಷ ಸಮಿತಿ (ದಸಂಸ) ಭೀಮಾವಾದ ಕಾರ್ಯಕರ್ತರು ಕರ್ಜೆಯಲ್ಲಿ ಪ್ರತಿಭಟನೆ ನಡೆಸಿದರು.

ಇರುವ ಒಂದೇ ಮನೆಗೆ ಹೋಗುವ ರಸ್ತೆಗೆ ಎರಡು ಕೋಟಿ ಹಣ ಬಿಡುಗಡೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇಲ್ಲಿ ಮೀಸಲು ಅರಣ್ಯ ಕಡಿದು ಗುತ್ತಿಗೆದಾರ ಕಂ ಕ್ರಶರ್ ಮಾಲೀಕ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣದಲ್ಲಿ ರಸ್ತೆ ನಿರ್ಮಿಸಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯಿತು.

ತನ್ನ ಉಪಯೋಗಕ್ಕಾಗಿ ಮಹಿಳೆಯೊಬ್ಬರ ಮನೆ ಸಂಪರ್ಕದ ಹೆಸರಿನಲ್ಲಿ ಸುಮಾರು ಎರಡು ಕಿಲೋ ಮೀಟರ್ ಉದ್ದದ ಎರಡು ಕೋಟಿ ಮೊತ್ತದ ರಸ್ತೆ ಕಾಮಾಗಾರಿ ಆರಂಭಗೊಂಡಿದೆ. ಅಚ್ಚರಿ ಎಂದರೆ ಇಡೀ ಕಮಗಾರಿಯ ಗುತ್ತಿಗೆ ಕೂಡ ಕ್ರಶರ್ ಮಾಲಿಕನೇ ವಹಿಸಿಕೊಂಡಿದ್ದಾನೆ.ಅಸಲಿಗೆ ಈ ಮಹಿಳೆಗೆ ಹತ್ತಿರದಲ್ಲೇ ಬೇರೊಂದು ರಸ್ತೆಯ ವ್ಯವಸ್ಥೆ ಇದೆ.ಎರಡು ಕಿಲೋ ಮಿಟರ್ ವರೆಗೆ ಒಂದೇ ಒಂದು ಮನೆ ಕೂಡ ಕಾಣ ಸಿಗುವುದಿಲ್ಲ.

ಕಾಡು ಪ್ರಾಣಿಗಳು ಓಡಾಡುವ ಮೀಸಲು ಅರಣ್ಯದಲ್ಲಿ ಒಂದೇ ಒಂದು ಎಲೆಯನ್ನು ಮುಟ್ಟಿದರೂ ಕಾನೂನು ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆ ಗುತ್ತಿಗೆದಾರನ ಪರವಾಗಿ ಕೆಲಸ ಮಾಡಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.ಲೋಕೊಪಯೋಗಿ ಇಲಾಖೆ ,ಕಂದಾಯ ಇಲಾಖೆ,ಅರಣ್ಯ ಅಧಿಕಾರಿಗಳನ್ನ ಸ್ಥಳಕ್ಕೆ ಕರೆಯಿಸಿದ ಹೋರಾಟಗಾರರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಅರ್ ಟಿ ಐ ಕಾರ್ಯಕರ್ತರಾದ ಸರೀಶ್ ಪೂಜಾರಿ,ಸದಾಶಿವ್ ,ಜಯಕರ್ ನಾಯಕ್ ,ದಲಿತ ಸಂಘರ್ಷ ಸಮಿತಿ ಶೇಖರ್ ಹಾವಂಜೆ ಮತ್ತಿತರರು ಭಾಗವಹಿಸಿದ್ದರು.

Edited By :
Kshetra Samachara

Kshetra Samachara

29/04/2022 09:01 am

Cinque Terre

12.7 K

Cinque Terre

0

ಸಂಬಂಧಿತ ಸುದ್ದಿ