ಮಣಿಪಾಲ: ಅಂಬಾಗಿಲು ಮಣಿಪಾಲ ಚತುಷ್ಫತ ರಸ್ತೆಯಲ್ಲಿ ಬಲಿಗೆ ಕಾಯುತ್ತಿರುವ “ಮಹಾಗೋಡೆ” ಬಗ್ಗೆ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಅಪಾಯಕಾರಿ ಗೋಡೆ ತೆರವು ಮಾಡುವ ಕುರಿತು ಪಬ್ಲಿಕ್ ನೆಕ್ಸ್ಡ್ ಶಾಸಕರನ್ನು ಸಂಪರ್ಕ ಮಾಡಿತು.
ಈ ವೇಳೆ ಮಾತನಾಡಿದ ಶಾಸಕ ರಘುಪತಿ ಭಟ್, ಈ ಗೋಡೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದವರದ್ದು. ನಾನು ಅದರ ಜಿಎಂ ಜೊತೆ ತುಂಬ ಸಲ ಮಾತಾಡಿದ್ದೇನೆ. ಜಿಲ್ಲಾಧಿಕಾರಿ ಕೂಡ ಮಾತನಾಡಿದ್ದಾರೆ. ಅವರು ಸ್ಪಾಟ್ ಗೂ ಬಂದು ನೋಡಿದ್ದಾರೆ. ಅದು ಕೇಂದ್ರ ಸರ್ಕಾರದ ಜಮೀನು ಮತ್ತು ಕಾಂಪೌಂಡ್ ಆದ ಕಾರಣ ನಾವು ಕೆಡವಲು ಆಗುವುದಿಲ್ಲ. ಸುಮಾರು 40 ಮೀಟರ್ ಜಾಗ ತೆರವಾಗಬೇಕಿದೆ. ಅದನ್ನು ತೆರವು ಮಾಡದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ತಕ್ಷಣ ಆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
Kshetra Samachara
23/04/2022 06:25 pm