ಉಡುಪಿ: ಕಾಪುವಿನಲ್ಲಿ ಬಿಜೆಪಿ ಮತ್ತು ಎಸ್ಡಿಪಿಐ ಒಟ್ಟಿಗೆ ಸ್ಪರ್ಧೆ ಮಾಡಿದೆ. ಜೊತೆಯಾಗಿ ನಾಮಪತ್ರ ಸಲ್ಲಿಸಿ ಜೊತೆಯಾಗಿ ವಿಜಯೋತ್ಸವ ಮಾಡಿವೆ. ಕಾಪುವಿನಲ್ಲಿ ಬಿಜೆಪಿ ಮತ್ತು ಎಸ್ಡಿಪಿಐಗೆ ಲವ್ ಆಗಿದ್ದು , ಹಿಜಾಬ್ ವಿವಾದ ಬಿಜೆಪಿ ಮತ್ತು ಎಸ್ ಡಿಪಿಐ ನ ಕೂಸು ಎಂದು ಮಾಜಿ ಸಚಿವ ಸೊರಕೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸೊರಕೆ, ನಾನು ಹೊಡೆದ ಹಾಗೆ ಮಾಡುತ್ತೇನೆ ನೀನು ಕೂಗಿದ ಹಾಗೆ ಮಾಡು ಎಂಬಂತೆ ಬಿಜೆಪಿ ಮತ್ತು ಎಸ್ ಡಿಪಿಐ ವರ್ತಿಸುತ್ತಿದೆ ಎಂದು ಆರೋಪಿಸಿದರು. ಚಡ್ಡಿ ಅಭಿಯಾನ ಕುರಿತು ಮಾತನಾಡಿದ ಅವರು ಬಿಜೆಪಿಯವರು ಕೆಪಿಸಿಸಿ ಕಚೇರಿಗೆ ಚಡ್ಡಿ ಕಳಿಸುತ್ತಿದ್ದಾರೆ. ಜಿಲ್ಲಾ ಕಚೇರಿಗೆ ಕಳಿಸಿದ್ದರೆ ಸೂಕ್ತ ಬಟವಾಡೆ ಮಾಡುತ್ತಿದ್ದೆವು ಎಂದರು.
ಹಾಗೇ ನಾವು ಶಿಕ್ಷಣದಲ್ಲಿ ನಂಬರ್1 ಜಿಲ್ಲೆಯಾಗಿದ್ದೆವು. ಇಂತಹ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮಾಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡು ಹೋದರು. ಮುಂದಿನ ಚುನಾವಣೆಗೋಸ್ಕರ ಹೀಗೆಲ್ಲ ಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವವರು ಕೂಡ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಗತಿಪರವಾದ ಕರಾವಳಿ ಜಿಲ್ಲೆಯನ್ನು ಪ್ರಯೋಗಶಾಲೆಯನ್ನಾಗಿ ಮಾಡಿದ್ದಾರೆ ಎಂದರು.
Kshetra Samachara
08/06/2022 03:45 pm