ಉಡುಪಿ: ಪೇಜಾವರ ಮಠಕ್ಕೆ ಒಳಪಟ್ಟ ಶ್ರೀಕೃಷ್ಣ ಬಾಲ ನಿಕೇತನ ನೂತನ ಶಾಲೆ ಕಟ್ಟಡವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟನೆ ಮಾಡಿದರು. ಉಡುಪಿಯ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ, ಶಾಲೆಯ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟರು. ನಿರ್ಮಲಾ ಸೀತಾರಾಮನ್ ಅನಾಥ ಮಕ್ಕಳ ಜೊತೆ ಕೆಲ ಹೊತ್ತು ಸಮಾಲೋಚನೆ ಮಾಡಿದರು. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನನ್ನ ಸಂಸದರ ನಿಧಿಯಿಂದ ಶಾಲಾ ಕಟ್ಟಡ ನಿರ್ಮಾಣ ಮಾಡಿಸಿದ್ದು ರಾಜಕೀಯ ಜೀವನದಲ್ಲಿ ನೆನಪಿನಲ್ಲಿ ಉಳಿಯುವಂಥದ್ದು. ನನ್ನ ಜೀವನಕ್ಕೆ ಭಗವಾನ್ ಶ್ರೀಕೃಷ್ಣ ದೇವರ ಆಶೀರ್ವಾದ ದೊರಕಿದೆ. ಜನ ಸೇವೆಯೇ ಜನಾರ್ದನ ಸೇವೆ ಎಂದುಕೊಂಡವಳು ನಾನು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
PublicNext
14/05/2022 08:24 pm