ಉಡುಪಿ: ರಾಷ್ಟ್ರೀಯ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದೆಹಲಿಯಿಂದಲೇ ಕುಂದಾಪುರ- ಹೊನ್ನಾವರ ಚತುಷ್ಪತ ಹೆದ್ದಾರಿ ಸೇರಿದಂತೆ ದೇಶಾದ್ಯಂತ 33 ರಾಷ್ಟ್ರೀಯ ಹೆದ್ದಾರಿಗಳನ್ನು ಉದ್ಘಾಟಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ವರ್ಚುವಲ್ ಮೂಲಕ ಕುಂದಾಪುರ ಹೊನ್ನಾವರ ಚತುಷ್ಪತ ರಸ್ತೆ ಲೋಕಾರ್ಪಣೆ ಮಾಡಿದರು. ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನೇರಪ್ರಸಾರ ನಡೆಯಿತು. ಈ ವೇಳೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ದೇಶಾದ್ಯಂತ ಸಮರೋಪಾದಿಯಲ್ಲಿ ಹೆದ್ದಾರಿಗಳ ನಿರ್ಮಾಣ ನಡೆಯುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿದಿನ 12 ಕಿ.ಮೀ.ನಷ್ಟು ದೇಶದಲ್ಲಿ ರಸ್ತೆ ನಿರ್ಮಾಣ ಆಗುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರತಿದಿನ 30 ಕಿ.ಮೀ.ನಷ್ಟು ಹೆದ್ದಾರಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ಕುಂದಾಪುರದಿಂದ ಹೊನ್ನಾವರವರೆಗೆ 2,639 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ್ದೇವೆ. ತೀರ್ಥಹಳ್ಳಿ ಶೃಂಗೇರಿ ರಸ್ತೆ 96 ಕೋಟಿ, ಚಾರ್ಮಾಡಿ ಘಾಟ್ ರಸ್ತೆ ತಡೆಗೋಡೆಗೆ 19 ಕೋಟಿ ಶಿಲಾನ್ಯಾಸ ಆಗಿದೆ. ಎಲ್ಲಾ ಕಾಮಗಾರಿ ಶೀಘ್ರ ಮುಗಿಯಲಿದೆ ಎಂದು ಹೇಳಿದರು.
Kshetra Samachara
19/12/2020 04:40 pm