ಮುಲ್ಕಿ: ಮಂಗಳೂರು ಉತ್ತರ ದೇರೆಬೈಲು ಉತ್ತರ 17ನೇ ವಾರ್ಡ್ ಕಳೆದ 35 ವರ್ಷಗಳಿಂದ ಹಕ್ಕುಪತ್ರ ಇಲ್ಲದ 32 ಬಡ ಕುಟುಂಬಗಳಿಗೆ 94cc ಹಕ್ಕು ಪತ್ರವನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಹಲವು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಕಾದು ಕುಳಿತವರಿಗೆ ಅವರ ಮನೆ ಹಕ್ಕನ್ನು ನೀಡಲಾಗಿದೆ.
ಸರಕಾರ ಆಶ್ರಯ ಕಾಲೊನಿಗಳಲ್ಲಿ ವಸತಿ ಸಮುಚ್ಚಯ ನಿರ್ಮಿಸಿ ಬಡ ವರ್ಗಕ್ಕೆ ಮನೆ ಕೊಡುವ ಯೋಜನೆ ರೂಪಿಸಿದೆ. ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಸುರತ್ಕಲ್ ನಲ್ಲಿ ಶೀಘ್ರ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ ಎಂದರು.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಮೃತ್ ಯೋಜನೆಯಡಿ ಒಳಚರಂಡಿ, ಜಲಸಿರಿ ಭಾಗ್ಯದಡಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಮತ್ತಿತರ ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂದರು.
ದೇರೆಬೈಲ್ ವಾರ್ಡ್ ನಲ್ಲಿ ಮನಪಾ ಸದಸ್ಯ ಮನೋಜ್ ಅವರ ಬೇಡಿಕೆಯಂತೆ ರಸ್ತೆ ಕಾಂಕ್ರಿಟೀಕರಣ, ಕುಡಿಯುವ ನೀರಿಗೆ ಟ್ಯಾಂಕ್ ನಿರ್ಮಾಣ ಮತ್ತಿತರ ಯೋಜನೆ ಹಂತ ಹಂತವಾಗಿ ನಡೆಯಲಿದೆ ಎಂದರು.
ಕಾರ್ಪೊರೇಟರ್ ಮನೋಜ್ ಕುಮಾರ್, ಗ್ರಾಮ ಲೆಕ್ಕಿಗ ಚರಣ್,ಕಂದಾಯ ಅಧಿಕಾರಿ ಸ್ಟೀಫನ್,ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಹ ಸಂಚಾಲಕ ಕಿಶೋರ್ ಬಾಬು,ರಾಮ್ ದಾಸ್ ನಾಯಕ್,ಎಪಿಎಂಸಿ ಸದಸ್ಯ ರಾಘವ ಶೆಟ್ಟಿ,ಭರತ್ ಕೋಡಿಕಲ್,ಜಗದೀಶ್,ಮಂಡಲ ಸದಸ್ಯೆ ಜಯಲಕ್ಷ್ಮಿ,ನಿರ್ಮಲಾ ಟೀಚರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/11/2020 01:17 pm