ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬೆಂಗಳೂರಿನ ಸೈಂಟ್ ಪೆಟ್ರಿಕ್ ಚರ್ಚ್ ನಲ್ಲಿ ಆಸ್ಕರ್ ಅಂತ್ಯಸಂಸ್ಕಾರ....

ಮಂಗಳೂರು: ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಪಾರ್ಥೀವ ಶರೀರವನ್ನು ನಗರದ ಫಾದರ್ ಮುಲ್ಲರ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು.

ನಾಳೆ ಬೆಳಗ್ಗೆ 9.30 ಕ್ಕೆ ಅವರ ಪಾರ್ಥಿವ ಶರೀರವನ್ನು ಉಡುಪಿ ಚರ್ಚ್ ನಲ್ಲಿರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಳಿಕ ಉಡುಪಿ ಜನರಿಗೆ ಅಂತಿಮ ದರ್ಶನಕ್ಕಾಗಿ ಉಡುಪಿ ಕಾಂಗ್ರೆಸ್ ಕಚೇರಿಯಲ್ಲಿ ಅವಕಾಶ ನೀಡಲಾಗುತ್ತದೆ.

ಮಧ್ಯಾಹ್ನ 2.30ಕ್ಕೆ ಮಂಗಳೂರಿಗೆ ರವಾನೆ. ಮಧ್ಯಾಹ್ನ 3.30 ರಿಂದ 5.30ವರೆಗೆ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ. ಬಳಿಕ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಶವಾಗಾರಕ್ಕೆ ರವಾನೆ.

ಸೆ.15 ರಂದು ಮುಂಜಾನೆ 10.30ಯಿಂದ ನಗರದ ಮಿಲಾಗ್ರೀಸ್ ಚರ್ಚ್ ನಲ್ಲಿ ಪೂಜೆ. ಅಲ್ಲಿಂದ ಬೆಂಗಳೂರಿಗೆ ರವಾನೆ ಅಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ. ಬಳಿಕ ಬೆಂಗಳೂರಿನ ಸೈಂಟ್ ಪೆಟ್ರಿಕ್ ಚರ್ಚ್ ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

Edited By : Nagesh Gaonkar
Kshetra Samachara

Kshetra Samachara

13/09/2021 05:50 pm

Cinque Terre

33.96 K

Cinque Terre

0

ಸಂಬಂಧಿತ ಸುದ್ದಿ