ಉಡುಪಿ: ಇಂಧನ ಸಚಿವ ಸುನೀಲ್ ಕುಮಾರ್ ವಿನೂತನವಾಗಿ ಹುಟ್ಟುಹಬ್ಬ ಆಚರಿಸಿದ್ದು ಸದ್ಯ ಅದರ ಫೂಟೇಜ್ ವೈರಲ್ ಆಗುತ್ತಿದೆ. ಸಚಿವರಾದ ಬಳಿಕ ಮೊದಲ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸದೇ ವಿಶೇಷವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ತಮ್ಮ ಹುಟ್ಟೂರು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಲ್ಲ ಲೈನ್ ಮ್ಯಾನ್‌ಗಳನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಊಟ ಮಾಡಿದ್ದಾರೆ.
ತಮ್ಮ ಹುಟ್ಟು ಹಬ್ಬದ ನಿಮಿತ್ತ ಲೈನ್ ಮ್ಯಾನ್‌ಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಲೈನ್ ಮ್ಯಾನ್‌ಗಳ ಮಧ್ಯೆ ಕುಳಿತು ಊಟ ಮಾಡಿದ್ದು ಮಾತ್ರವಲ್ಲದೇ ಊಟ ಮಾಡುತ್ತಾ ಅವರ ಸಮಸ್ಯೆಯನ್ನು ಆಲಿಸಿದ್ದಾರೆ. ಸಚಿವರ ವಿಭಿನ್ನ ಹುಟ್ಟು ಹಬ್ಬ ಆಚರಣೆ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.ಮಾತ್ರವಲ್ಲ ಈ ಹುಟ್ಟುಹಬ್ಬದ ವಿಡಿಯೋ ವೈರಲ್ ಆಗುತ್ತಿದೆ.
Kshetra Samachara
16/08/2021 01:11 pm