ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೃತ ಮೀನುಗಾರನ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ನೀಡಿದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಸಿಡಿಲು ಬಡಿದು ಮೃತಪಟ್ಟ ಮೀನುಗಾರರೋರ್ವರ ಕುಟುಂಬಕ್ಕೆ ಪ್ರಾಕೃತಿಕ ವಿಕೋಪದಡಿ ಮಂಜೂರಾದ 5 ಲಕ್ಷ ರೂ. ಹಣವನ್ನು ಶಾಸಕ ವೇದವ್ಯಾಸ ಕಾಮತ್ ಅವರು ವಿತರಿಸಿದರು.

ಬಳಿಕ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮೀನುಗಾರಿಕೆಗೆ ತೆರಳಿದ್ದ ವೇಳೆ ಬೆಂಗ್ರೆ ಗ್ರಾಮದ ಮೀನುಗಾರ ಹೈದರಾಲಿ ಸಿಡಿಲು ಹೊಡೆದು ಮೃತಪಟ್ಟಿದ್ದರು. ಇದೀಗ ಅವರ ಕುಟುಂಬಕ್ಕೆ ಸರಕಾರದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷ ರೂ. ಮಂಜೂರಾಗಿದೆ. ಈ ಚೆಕ್ ಅನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಸ್ಥಳೀಯ ಕಾರ್ಪೋರೇಟರ್ ಮುನೀಬ್ ಬೆಂಗ್ರೆ, ಸ್ಥಳೀಯರಾದ ಸಲೀಂ ಬೆಂಗ್ರೆ, ಗಂಗಾಧರ್ ಸಾಲ್ಯಾನ್, ಮಸೀದಿಯ ಅಧ್ಯಕ್ಷರು, ತಹಶೀಲ್ದಾರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

17/06/2022 06:11 pm

Cinque Terre

11.43 K

Cinque Terre

0

ಸಂಬಂಧಿತ ಸುದ್ದಿ