ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ 34 ಸಾವಿರ ಡೋಸ್ ವ್ಯಾಕ್ಸಿನ್ ಕೊರತೆ ಇದೆ : ಸಚಿವ ಸುನಿಲ್ ಕುಮಾರ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ನಿಧಾನವಾಗಿ ಜಾಸ್ತಿಯಾಗುತ್ತಿದೆ ಉಡುಪಿಯಲ್ಲಿ ಸದ್ಯ 1368 ಸಕ್ರಿಯ ಪ್ರಕರಣಗಳಿವೆ.

ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡುವ ನಿರ್ಣಯ ಮಾಡಿದ್ದೇವೆ. ಮನೆಯವರು, ರೋಗಿಗಳು ಜಿಲ್ಲಾಡಳಿತದ ಜೊತೆ ಸಹಕಾರ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಕೋವಿಡ್ ಮೀಟಿಂಗ್ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ,ಸ್ಥಳೀಯಾಡಳಿತದ ಜೊತೆ ಜನರು ಸಹಕಾರ ಮಾಡಬೇಕು.

ಕೋವಿಡ್ ನಿಯಂತ್ರಣಕ್ಕೆ ಇದು ಸೂಕ್ತ ಎಂದು ಅಧಿಕಾರಿಗಳು, ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಜಿಲ್ಲೆಯಲ್ಲಿ 2000 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಸಿದ್ಧವಿದೆ ಎಂದು ಹೇಳಿದರು.

ಹೆಬ್ರಿ, ಕಾರ್ಕಳ, ಉಡುಪಿ, ಕುಂದಾಪುರದಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಸ್ಥಾಪನೆ ಕೆಲಸ ಒಂದು ವಾರದೊಳಗೆ ಪೂರ್ಣ ಆಗಲಿದೆ.ಎಲ್ಲ ಯಂತ್ರೋಪಕರಣ ಬಂದಿದ್ದು ವಾರದೊಳಗೆ ಘಟಕ ಪೂರ್ಣಗೊಳ್ಳಲಿದೆ. ಆಗಸ್ಟ್ 30ರ ಒಳಗೆ ಜಿಲ್ಲೆಯಲ್ಲಿ ಐಸಿಯು ಹೆಚ್ಚಿಸುತ್ತೇವೆ. ಕಾರ್ಕಳ15, ಕುಂದಾಪುರ 15, ಉಡುಪಿಯ 20 ಐಸಿಯು ಹೆಚ್ಚಳ ಮಾಡುತ್ತೇವೆ ಎಂದರು.

ಉಡುಪಿಯಲ್ಲಿ 34 ಸಾವಿರ ಡೋಸ್ ವ್ಯಾಕ್ಸಿನ್ ಕೊರತೆ ಇದೆ ಎಂದ ಸಚಿವರು,ರಾಜ್ಯದ ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ವ್ಯಾಕ್ಸಿನ್ ತರಿಸುತ್ತೇವೆ ಎಂದರು.

ಐದು ಪಾಸಿಟಿವ್ ಕೇಸ್ 100 ಮೀಟರ್ ಒಳಗೆ ಬಂದರೆ ಕಂಟೈನ್ಮೆಂಟ್ ಜೋನ್ ಮಾಡುತ್ತೇವೆ. ಮನೆ , ಅಪಾರ್ಟ್ಮೆಂಟ್ ಸೀಲ್ ಮಾಡಲು ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಕೋವಿಡ್ ಉಸ್ತುವಾರಿ ಸುನಿಲ್ ಕುಮಾರ್ ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

07/08/2021 03:10 pm

Cinque Terre

15.27 K

Cinque Terre

1

ಸಂಬಂಧಿತ ಸುದ್ದಿ