ಉಡುಪಿ: ನಿಷ್ಪಕ್ಷಪಾತ ವರದಿಗಳ ಮೂಲಕ ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನು ಪಬ್ಲಿಕ್ ನೆಕ್ಸ್ಟ್ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಕಾರ್ಯಾಂಗ, ಶಾಸಕಾಂಗದ ಜೊತೆಗೆ ಪತ್ರಿಕಾರಂಗ ಕೂಡ ನಿಷ್ಕ್ರಿಯ ಆಗುತ್ತಿರುವ ಹೊತ್ತಿಗೆ ಪಬ್ಲಿಕ್ ನೆಕ್ಸ್ಟ್ ಡಿಜಿಟಲ್ ಮೀಡಿಯಾ ಜನರಿಗೆ ನಿಷ್ಪಕ್ಷಪಾತವಾಗಿ ಸತ್ಯಾಂಶ ಹೊರಗಿಡುವ ವರದಿಗಳನ್ನು ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡುತ್ತಿದೆ.ಕಳೆದ ಒಂದು ವರ್ಷದಿಂದ ಪಬ್ಲಿಕ್ ನೆಕ್ಸ್ಟ್ ನ ವರದಿಗಳನ್ನು ಗಮನಿಸುತ್ತಿದ್ದೇನೆ.ಈ ಡಿಜಿಟಲ್ ಮೀಡಿಯಾ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಸಂಸ್ಥೆಗೆ ಶುಭ ಹಾರೈಸಿದ್ದಾರೆ.
Kshetra Samachara
13/09/2021 01:29 pm