ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರಸಭೆ ನೀರಿನ ಮೀಟರ್ ಕಿತ್ತೊಗೆಯಿರಿ: ಮೀಟಿಂಗ್‌ನಲ್ಲಿ ಶಾಸಕ ರಘುಪತಿ ಭಟ್ ಗರಂ!

ಉಡುಪಿ: ಇವತ್ತು ನಡೆದ ನಗರಸಭೆ ಮೀಟಿಂಗ್‌ನಲ್ಲಿ ನಗರಸಭೆ ವ್ಯಾಪ್ತಿಯ ನೀರಿನ ಬಿಲ್ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ವಾರಾಹಿ ಕುಡಿಯುವ ನೀರಿನ ಪೂರೈಕೆಯ ಗುತ್ತಿಗೆಯನ್ನು ವಹಿಸಿಕೊಂಡಿರುವ ಕೆಯುಐಡಿಎಫ್‍ಸಿ ಸಂಸ್ಥೆ ಅಳವಡಿಸಿದ ಹೊಸ ನೀರಿನ ಮೀಟರ್, ಗಾಳಿಗೂ (ಏರ್ ಪ್ರೆಶರ್) ರನ್ ಆಗುತ್ತಿರುವುದು ಬಯಲಾಗಿದೆ. ಆದ್ದರಿಂದ ಸಂಸ್ಥೆ ಈವರೆಗೆ ಅಳವಡಿಸಿದ ಸುಮಾರು 8,000 ಮೀಟರ್‌ಗಳನ್ನು ತಕ್ಷಣ ತೆಗೆದು ಹಾಕುವಂತೆ ಶಾಸಕ ಕೆ.ರಘುಪತಿ ಭಟ್ ಅವರು ಸೂಚಿಸಿದ ಪ್ರಸಂಗ ನಡೆಯಿತು.

ಇಂದು ನಡೆದ ನಗರಸಭೆಯ ಮೀಟಿಂಗಲ್ಲಿ ಬಿಜೆಪಿ ಸದಸ್ಯ ಸುಂದರ ಕೆ.ಕಲ್ಮಾಡಿ ಅವರು ಮೀಟರ್ ಅವಾಂತರದ ಬಗ್ಗೆ ಸಭೆಯ ಗಮನ ಸೆಳೆದರು. 300 ರೂ.ನೀರಿನ ಬಿಲ್ ಬರುತ್ತಿದ್ದ ಮನೆಗಳಿಗೆ 1,300 ರೂ. ಬಿಲ್ ಬರುತ್ತಿದೆ. ಇದಕ್ಕೆ ಕಾರಣವೇನು ಎಂದು ಅವರು ಪ್ರಶ್ನಿಸಿದರು.

ಕೆಯುಐಡಿಎಫ್‍ಸಿ ಸಂಸ್ಥೆಯ ಅಧಿಕಾರಿ ಅರಕೇಶ್ ಅವರು 24*7 ನೀರು ಪೂರೈಕೆಯ ದೃಷ್ಟಿಯಿಂದ ಈ ನೂತನ ಮೀಟರ್ ಅಳವಡಿಸಿದ್ದು, ಇದು ನೀರು ಮಾತ್ರವಲ್ಲದೆ ಪೈಪ್‍ನಲ್ಲಿ ಬರುವ ಗಾಳಿಯ ಒತ್ತಡಕ್ಕೂ ರನ್ ಆಗುತ್ತದೆ ಎಂದು ಉತ್ತರಿಸಿದರು.

ಈ ವೇಳೆ ಶಾಸಕ ರಘುಪತಿ ಭಟ್ ಅವರು ಸಂಸ್ಥೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈವರೆಗೆ ಅಳವಡಿಸಲಾದ ಎಲ್ಲ ಮೀಟರ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಿದರು.

ಈ ಸಭೆಯಲ್ಲಿಯೇ ನಿರ್ಣಯ ಮಾಡಿ. ಈವರೆಗೆ ಮಾಡಿದ ಕಾಮಗಾರಿಗೆ ಬಿಲ್ ಕೊಡಬೇಡಿ ಎಂದು ಪೌರಾಯುಕ್ತರಿಗೆ ತಾಕೀತು ಮಾಡಿದ ಅವರು ವಾರಾಹಿ ನೀರು ಉಡುಪಿಗೆ ಬಂದರೂ, 24*7 ನೀರು ಕೊಡಲಾಗುತ್ತದೆ ಎಂಬುದಕ್ಕೆ ಗ್ಯಾರಂಟಿ ಏನಿದೆ ? ಈ ಮೀಟರ್ ಅವಾಂತರದ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ತನಗೆ ವರದಿ ನೀಡುವಂತೆ ಸೂಚಿಸಿದರು.

Edited By : Somashekar
Kshetra Samachara

Kshetra Samachara

20/07/2022 08:03 pm

Cinque Terre

9.4 K

Cinque Terre

3

ಸಂಬಂಧಿತ ಸುದ್ದಿ