ಉಡುಪಿ: ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊಸ ಯೋಜನೆ ಜಾರಿಗೆ ತರುವ ಬಗ್ಗೆ ಚಿಂತಿಸಲಾಗಿದೆ. ಬಜೆಟ್ ಗೆ ಮುನ್ನ ಈ ಯೋಜನೆಯ ಬಗ್ಗೆ ಪೂರ್ವಭಾವಿಯಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾದ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ಅವರು ಇಲಾಖೆಗೆ ಬಜೆಟ್ ಮೂಲಕ ಸಿಗಬೇಕಾದ ಮೊತ್ತ ಹಾಗೂ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 8 ಅಥವಾ 9 ರಂದು ಸಭೆ ನಡೆಯಲಿದೆ. ಆದ್ದರಿಂದ ಪೂರ್ವಭಾವಿ ಸಿದ್ದತೆಗಳು , ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಬೇರೆ ಬೇರೆ ಇಲಾಖೆಯಲ್ಲಿರುವ ಶೇಕಡಾ 25 ರ ನಿಧಿಯನ್ನ ಹಿಂದುಳಿದ, ಸಮಾಜ ಕಲ್ಯಾಣ ಇಲಾಖೆಗೆ ತರುವ ಪ್ರಯತ್ನದ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಓಬವ್ವ ಆತ್ಮರಕ್ಷಣೆಯ ಪಡೆಯನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದ್ದು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದರು. ಅಸ್ಪೃಶ್ಯತೆ ನಿವಾರಣೆ ಬಗ್ಗೆ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಅಂಬೇಡ್ಕರ್ ಹೆಸರಿನಲ್ಲಿ ಹೊಸ ಯೋಜನೆ ತರಲಾಗುವುದು ಎಂದರು.
Kshetra Samachara
07/02/2022 04:02 pm