ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ತುಂಬ ಖುಷಿ ಕೊಟ್ಟಿದೆ ಎಂದು ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶ್ರೀಗಳು, ಈ ಬಾರಿಯ ಬಜೆಟ್‌ನಲ್ಲಿ ಇರುವ ಗೋ ಶಾಲೆಗಳ ಪುನಶ್ಚೇತನ ಮತ್ತು ಗೋಶಾಲೆಗಳಿಗೆ ಅನುದಾನ ಹೆಚ್ಚಿಸಿರುವುದು ಬಹಳ ಸಂತಸ ತಂದಿದೆ.ಪಶು ವೈದ್ಯರ ನೇಮಕಾತಿ ನಿರ್ಧಾರ ಸ್ವಾಗತಾರ್ಹವಾದುದು.ಇದಲ್ಲದೆ ದೇವಸ್ಥಾನಗಳಿಗೆ ಸ್ವಾಯತ್ತತೆ ಕಲ್ಪಿಸಿರುವುದು, ಅರ್ಚಕರ ವೇತನವನ್ನು ಹೆಚ್ಚಿಸಿರುವುದು ಬಹಳ ಒಳ್ಳೆಯ ನಿರ್ಧಾರ ಎಂದು ಶ್ರೀಗಳು ಹೇಳಿದ್ದಾರೆ.ಇದಲ್ಲದೆ ಆರೋಗ್ಯ ಕ್ಷೇತ್ರಕ್ಕೂ ಈ ಬಜೆಟ್ ನಲ್ಲಿ ಸಾಕಷ್ಟು ಅನುದಾನ ನೀಡಿರುವುದು ತುಂಬ ಸಂತಸ ತಂದಿದೆ ಎಂದು ಶ್ರೀಗಳು ಹೇಳಿದ್ದಾರೆ.
PublicNext
04/03/2022 08:32 pm