ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹಿಜಾಬ್ ವಿವಾದ : ಆರ್ ಎನ್ ಶೆಟ್ಟಿ ಕಾಲೇಜಿನಲ್ಲಿ ಸಂಘರ್ಷದ ವಾತಾವರಣ

ಕುಂದಾಪುರ: ನಗರದ ಆರ್ ಎನ್ ಶೆಟ್ಟಿ ಕಾಲೇಜಿನಲ್ಲಿ ಇತ್ತಂಡಗಳ ವಿದ್ಯಾರ್ಥಿಗಳ ಮಧ್ಯೆ ಘೋಷಣೆಗಳು ನಡೆದಿದ್ದು ಅಕ್ಷರಶಃ ಸಂಘರ್ಷದ ವಾತಾವರಣ ನಿರ್ಮಾಣಗೊಂಡಿದೆ. ಎರಡು ದಿನಗಳಿಂದ ಸರಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜು ಭಂಡಾರ್ಕರ್ಸ್ ನಲ್ಲಿ ವಿವಾದ ಭುಗಿಲೆದ್ದಿತ್ತು.ಆದರೆ ಇಂದು ಆರ್ ಎನ್ ಶೆಟ್ಟಿ ಕಾಲೇಜಿನಲ್ಲಿ ಇತ್ತಂಡಗಳ ವಿದ್ಯಾರ್ಥಿನಿಯರು ಅಕ್ಷರಶಃ ಘೋಷಣೆಗಳ ಮೂಲಕ ಶಕ್ತಿ ಪ್ರದರ್ಶನಕ್ಕಿಳಿದಿದ್ದಾರೆ.ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.ಕಾಲೇಜಿನ ಸುತ್ತ ಉದ್ವಿಗ್ನ ವಾತಾವರಣ ನೆಲೆಸಿದೆ.ಮುಸ್ಲಿಂ ಯುವತಿಯರು ಇವತ್ತು ಹಿಜಾಬ್ ಈಸ್ ಅವರ ರೈಟ್ ಎಂದು ಘೋಷಣೆ ಕೂಗಿದರೆ ,ಉಳಿದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆಗಿಳಿದಿದ್ದಾರೆ.

Edited By : Nagesh Gaonkar
PublicNext

PublicNext

05/02/2022 12:43 pm

Cinque Terre

52.13 K

Cinque Terre

25

ಸಂಬಂಧಿತ ಸುದ್ದಿ