ಮುಲ್ಕಿ:ಭಾರತೀಯ ಜನತಾ ಪಾರ್ಟಿ ಮುಲ್ಕಿ ಮಹಾಶಕ್ತಿ ಕೇಂದ್ರದ ವತಿಯಿಂದ
ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆ ಅಂಗವಾಗಿ, ಸೇವೆ ಮತ್ತು ಸಮರ್ಪಣೆ ಅಭಿಯಾನ 2021ನಿಮಿತ್ತ
ಸಮಾಜದ ವಿವಿಧ ಕಾರ್ಮಿಕ ವರ್ಗಗಳ ಗುರುತಿಸುವಿಕೆ ಕಾರ್ಯಕ್ರಮ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು
ಮುಲ್ಕಿ ಬಸ್ ನಿಲ್ದಾಣ ಸೇವಾಸಿಂಧು ಕೇಂದ್ರದಲ್ಲಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು
ಬಳಿಕ ಮುಲ್ಕಿಯ ಕಾರ್ನಾಡ್ ಮೆಸ್ಕಾಂ ಕಚೇರಿಯಲ್ಲಿ "ಮೆಸ್ಕಾಂ ಸಿಬ್ಬಂದಿ (ಲೈನ್ ಮ್ಯಾನ್) ಗಳಿಗೆ ಗೌರವಿಸಿ ಆರೋಗ್ಯ ಕಿಟ್ ವಿತರಿಸಲಾಯಿತು.
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಅಮೃತಾನಂದಮಯಿ ನಗರದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಸುರಕ್ಷ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಕೋವಿಡ್ ಸಂಕಷ್ಟದ ದಿನಗಳಲ್ಲಿ ಹಗಲಿರುಳೆನ್ನದೆ ಕೊರೊನಾ ವಾರಿಯರ್ಸ್ ಕೆಲಸ ಮಾಡಿದ ಮೆಸ್ಕಾಂ ಸಿಬ್ಬಂದಿಗಳ ಸಾಧನೆ ಶ್ಲಾಘನೀಯವಾಗಿದೆ.
ಕೊರೊನಾ ಸಂಕಷ್ಟಕ್ಕೀಡಾದವರಿಗೆ ಸರಕಾರದ ಸಹಾಯಹಸ್ತ ಈಗಾಗಲೇ ನೀಡಲಾಗಿದೆ ಎಂದರು.
ಈ ಸಂದರ್ಭ ಮಂಡಲಾಧ್ಯಕ್ಷ ಸುನೀಲ್ ಆಳ್ವ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷರು ಮತ್ತು ಬಿಜೆಪಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/10/2021 06:10 pm