ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯಕ್ಷಗಾನದಲ್ಲೂ ಮಾರ್ದನಿಸಿದ "ನೀ ತಾಂಟ್ರೆ ಬಾ... ತಾಂಟ್" ವೈರಲ್!

ಉಡುಪಿ: ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ " ನೀ ತಾಂಟ್ರೆ ಬಾ... ತಾಂಟ್" ಸಖತ್ ಟ್ರೆಂಡ್ ಆಗಿದೆ!

ಎಸ್ ಡಿಪಿಐ ಮುಖಂಡ 'ಮಹಾಶಯ'ರೊಬ್ಬರು ತಮ್ಮ ಭಾಷಣದಲ್ಲಿ ಈ ವಾಕ್ಯವನ್ನು ಬಳಸಿದ್ದು, ಬಳಿಕ ಅದು ಸಾಕಷ್ಟು ವೈರಲ್ ಕೂಡ ಆಗಿತ್ತು. ಕರಾವಳಿಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಡೈಲಾಗ್ ಈಗ ಬೇರೆ ಬೇರೆ ರೀತಿಯಲ್ಲಿ ಬಳಕೆಯಾಗಿ ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದೆ.

ಸದ್ಯ ಕರಾವಳಿಯ ಗಂಡು ಕಲೆ ಎಂದೆನಿಸಿದ ಯಕ್ಷಗಾನದ ಸಂಭಾಷಣೆಯಲ್ಲೂ "ನೀ ತಾಂಟ್ರೆ ..." ಬಳಕೆಯಾಗಿದೆ. ಯಕ್ಷಗಾನದಲ್ಲಿ ಬಳಕೆಯಾದ ಈ ಮಾತಿನ ತುಣುಕು 'ಅಣಕಾಗಿ' ಕರಾವಳಿ ಜನರಿಗೆ ಈಗ ಸಾಕಷ್ಟು ಮಜ, ಖುಷಿ ಕೊಡುತ್ತಿರುವುದಂತೂ ನಿಜ.

ಅಂದ ಹಾಗೆ, "ನೀ ತಾಂಟ್ರೆ..." ಡೈಲಾಗ್ ಬ್ಯಾರಿ ಭಾಷೆಯ ದ್ದಾಗಿದ್ದು, "ನೀನು ತಾಗ್ತಿಯಾ...ಬಾ ತಾಗು" ಎಂದು ಜಗಳಕ್ಕೆ ಆಹ್ವಾನ ನೀಡುವುದಾಗಿದೆ! ( ನನ್ನನ್ನು ಟಚ್ ಮಾಡಿ ನೋಡು...ಎಂಬರ್ಥದ್ದು).

Edited By : Nagesh Gaonkar
Kshetra Samachara

Kshetra Samachara

22/01/2021 10:04 am

Cinque Terre

30.45 K

Cinque Terre

1

ಸಂಬಂಧಿತ ಸುದ್ದಿ