ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಗೋಧ್ರಾ,ಅಯೋಧ್ಯೆಯಂತ ಘಟನೆ ಮರುಕಳಿಸಲು ಅವಕಾಶ ನೀಡಬೇಡಿ-ಮುರಳೀಕೃಷ್ಣ ಹಸಂತಡ್ಕ

ಪುತ್ತೂರು: ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗ ದಳ ನೇತೃತ್ವದಲ್ಲಿ ಫೆ.21 ರಂದು ಪ್ರತಿಭಟನೆ ನಡೆಸಿದರು. ವಿಶ್ವಹಿಂದೂ ಪರಿಷತ್ ಕಾರ್ಯಾಲಯದಿಂದ ಮೆರವಣಿಗೆ ಮೂಲಕ ಹೊರಟ ಹಿಂದೂ ಸಂಘಟನೆ ಕಾರ್ಯಕರ್ತರು ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಉದ್ದೇಶಿಸಿ ಮಾತನಾಡಿದ ಬಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಹಿಂದೂ ಕಾರ್ಯಕರ್ತರನ್ನು ಮುಟ್ಟುವ ಪ್ರಯತ್ನಕ್ಕೆ ಯತ್ನಿಸಿದಲ್ಲಿ ಮುಂದಿನ ದಿನಗಳಲ್ಲಿ ಇದರ ಕೆಟ್ಟ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದ ಅವರು, ದೇಶದಲ್ಲಿ ಮತ್ತೆ ಗೋಧ್ರಾ, ಅಯೋಧ್ಯೆಯಂತಹ ಘಟನೆ ಮರುಕಳಿಸಬೇಕು ಎಂದು ಯಾರಿಗಾದರೂ ಇಚ್ಛೆಯಿದ್ದಲ್ಲಿ, ಅದಕ್ಕೂ ಹಿಂದೂ ಸಮಾಜ ಸಿದ್ಧವಿದೆ ಎಂದರು.

Edited By : Manjunath H D
Kshetra Samachara

Kshetra Samachara

21/02/2022 08:22 pm

Cinque Terre

10.45 K

Cinque Terre

0

ಸಂಬಂಧಿತ ಸುದ್ದಿ