ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರುಮಾರ್ಗ: ನಿರಪರಾಧಿಗಳಿಗೆ ಶಿಕ್ಷೆ ಸರಿಯಲ್ಲ; ಶಾಸಕ ಡಾ. ಭರತ್ ಶೆಟ್ಟಿ

ವಾಮಂಜೂರು: ಮಂಗಳೂರು ಹೊರವಲಯದ ವಾಮಂಜೂರು ಠಾಣೆ ವ್ಯಾಪ್ತಿಯ ನೀರುಮಾರ್ಗದಲ್ಲಿ ನಡೆದ ಹಲ್ಲೆ ಪ್ರಕರಣವೊಂದರಲ್ಲಿ

ಅಪರಾಧಿಗಳನ್ನು ಬಂಧಿಸಿರುವ ಪೊಲೀಸರು ಹಲವು ನಿರಪರಾಧಿಗಳನ್ನೂ ವಶಕ್ಕೆ ಪಡೆದುಕೊಂಡಿದ್ದರು.

ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಶಾಸಕ ಡಾ.ಭರತ್ ಶೆಟ್ಟಿ ಅವರು ಖುದ್ದಾಗಿ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, "ಅಪರಾಧಿಗಳ ವಿಚಾರಣೆಗೆ ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ, ವಿನಾಕಾರಣ ನಿರಪರಾಧಿಗಳಿಗೆ ಶಿಕ್ಷೆಯಾಗುವುದು ಸರಿಯಲ್ಲ" ಎಂದರಲ್ಲದೆ, ಈ ಪ್ರಕರಣದಲ್ಲಿ ಭಾಗಿಯಾಗದ ಯುವಕರ ಮೇಲೆ ಪ್ರಕರಣ ದಾಖಲಾಗದಂತೆ ನೋಡಿಕೊಂಡು, ಶಾಸಕರು ಬಿಡಿಸಿ ಕರೆತಂದಿದ್ದಾರೆ.

ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಹಿಂದೂ ಜಾಗರಣ ವೇದಿಕೆಯ ಹರೀಶ್ ಮಟ್ಟಿ ಜೊತೆಗಿದ್ದರು.

Edited By : Nagaraj Tulugeri
Kshetra Samachara

Kshetra Samachara

12/12/2021 10:37 pm

Cinque Terre

17.23 K

Cinque Terre

4

ಸಂಬಂಧಿತ ಸುದ್ದಿ