ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗೋ ಕಳ್ಳರಿಗೆ ಸಚಿವ ಸುನಿಲ್ ಕುಮಾರ್ ಎಚ್ಚರಿಕೆ!

ಉಡುಪಿ: ಕರಾವಳಿಯಲ್ಲಿ ಗೋ ಕಳ್ಳತನ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಸುನಿಲ್ ಕುಮಾರ್ ,

ಗೋ ಕಳ್ಳತನ ಈಗ ನಿಯಂತ್ರಣಕ್ಕೆ ಬರುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ.ಈ ಹಿಂದೆ ಗೋ ಕಳ್ಳತನದಲ್ಲಿ ಭಾಗಿಯಾದವರನ್ನು ಕರೆಸಲು ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಗೋಹತ್ಯೆಯನ್ನು ಜಿಲ್ಲಾಡಳಿತ ಸಹಿಸುವುದಿಲ್ಲ ಎಂದು ಗೋ ಕಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಗೋ ಸಾಗಾಟ ಮಾಡುವವರನ್ನು ಇಲಾಖೆ ಮೂಲಕ ಎಚ್ಚರಿಸುತ್ತಿದ್ದೇವೆ ಎಂದ ಅವರು,ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ. ಈ ಸಂಬಂಧ ಕಠಿಣವಾದ ಕಾನೂನು ತಂದಿದ್ದೇವೆ. ಹದ್ದುಬಸ್ತಿನಲ್ಲಿ ಇಡುತ್ತೇವೆ.ಗೋ ಹತ್ಯಾ ನಿಷೇಧ ಕಾಯ್ದೆಗೆ ಸ್ಟೇ ತಂದಿದ್ದಾರೆ. ನಾವು ಕೂಡ ನ್ಯಾಯಾಲಯಕ್ಕೆ ಅಪೀಲ್ ಹೋಗಿದ್ದೇವೆ ಎಂದರು.

Edited By : Manjunath H D
Kshetra Samachara

Kshetra Samachara

08/10/2021 05:14 pm

Cinque Terre

19.43 K

Cinque Terre

1

ಸಂಬಂಧಿತ ಸುದ್ದಿ