ಮಂಗಳೂರು:ನನ್ನ ಮಗನ ಹತ್ಯೆ ಆದ ದಿನದಂದು ಪೊಲೀಸ್ ಕಮಿಷನರ್ ಬಂದು ಹತ್ಯಾ ಆರೋಪಿಗಳನ್ನು ಹಿಡಿತಿವಿ ಅಂದಿದ್ರು. ಆರೋಪಿಗಳನ್ನು ಹಿಡಿದ್ರು. ಆದ್ರೆ ಕೊಲೆಯ ಹಿಂದಿನ ನೈಜ ಸತ್ಯ ಏನು, ಯಾರೂ ಈ ಕೊಲೆ ಮಾಡಿಸಿದ್ರು ಎಂಬುವುದನ್ನು ಬಹಿರಂಗಪಡಿಸಿಲ್ಲ ಎಂದು ಇತ್ತೀಚೆಗೆ ಹತ್ಯೆಗೀಡಾದ ಫಾಝಿಲ್ ತಂದೆ ನೋವು ತೋಡಿಕೊಂಡಿದ್ದಾರೆ.
ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ಖಂಡಿಸಿ ಮುಸ್ಲಿಂ ಐಕ್ಯತಾ ಸಂಘದಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಮಗನ ಕೊಲೆ ಮಾಡಿದ ನೈಜ ಆರೋಪಿಗಳನ್ನು ಬಂಧಿಸಬೇಕು. ಕೊಲೆ ಹಿಂದಿರೋ ಕಾಣದ ಕೈಗಳನ್ನು ಕಂಡು ಹಿಡಿಯಬೇಕು. ಮಗನ ಕೊಲೆ ಕೇಸನ್ನು ಉನ್ನತ ತನಿಖೆ ಮಾಡಲು ಫಾಝಿಲ್ ತಂದೆ ಆಗ್ರಹಿಸಿದ್ದಾರೆ.
Kshetra Samachara
08/08/2022 07:55 pm