ಮಂಗಳೂರು: ಮೇಕೆದಾಟು ಪಾದಯಾತ್ರೆ ಮೂಲಕ ಕಾಂಗ್ರೆಸ್ ಕೋವಿಡ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಮಂಗಳೂರಿನಲ್ಲಿ ಸಚಿವ ಎಸ್.ಅಂಗಾರ ಹೇಳಿಕೆ ನೀಡಿದ್ದಾರೆ.ಚುನಾಯಿತ ಪ್ರತಿನಿಧಿಗಳಾಗಿರುವ ಕಾಂಗ್ರೆಸ್ಸಿಗರ ಮೇಕೆದಾಟು ಪಾದಯಾತ್ರೆಯನ್ನ ಜನ ಗುರುತು ಮಾಡ್ತಾರೆ,ಆಡಳಿತ ಪಕ್ಷವಾಗಿ ಸಣ್ಣತನ ತೋರಿಸಿದಾಗ ಜನ ಗುರುತು ಮಾಡ್ತಾರೆ.
ಒಂದು ಸರ್ಕಾರ ಏನು ನಿಯಮ ಪಾಲನೆ ಮಾಡಬೇಕು ಅದನ್ನ ಮಾಡುತ್ತೆ ವಿರೋಧ ಪಕ್ಷವಾಗಿ ಅವರು ಕೂಡ ಮಾಡಬೇಕಿತ್ತು, ಆದ್ರೆ ಅವರು ಮಾಡಿಲ್ಲಇದರಲ್ಲಿ ಸರ್ಕಾರದ ಅಸಹಾಯಕತೆ ಪ್ರಶ್ನೆ ಇಲ್ಲ, ಜನರು ಸ್ಪಂದಿಸದೇ ಇದ್ರೆ ಸರ್ಕಾರವನ್ನ ಹೇಳೋಕೆ ಬರಲ್ಲ ಸರ್ಕಾರ ತಾಳ್ಮೆಯಿಂದ ಪರಿಶೀಲಿಸಿ ಆ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಲಿದೆ ಎಂದರು.
Kshetra Samachara
10/01/2022 12:49 pm