ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಎಡವಟ್ಟು: ಕಯ್ಯಾರ ಕಿಂಞಣ್ಣ ರೈ ಬದಲು ಗೋವಿಂದ ಪೈ ಹೆಸರು

ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಪಠ್ಯ ವಿವಾದವು ಅಂತ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಮತ್ತೆ ಮತ್ತೆ ಹೊಸ ಹೊಸ ವಿವಾದ ತಲೆ ಎತ್ತುತ್ತಿದೆ. ಇದೀಗ ಗಡಿನಾಡ ಹೋರಾಟಗಾರ ನಾಡೋಜ ಕಯ್ಯಾರ ಕಿಂಞಣ್ಣ ರೈಗಳ ಬದಲಿಗೆ ಗೋವಿಂದ ಪೈಯವರ ಹೆಸರನ್ನು ಸೇರ್ಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಏಳನೇ ತರಗತಿಯ ಪಠ್ಯದಲ್ಲಿ ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದ ಪಠ್ಯದಲ್ಲಿ ಕಯ್ಯಾರ ಕಿಂಞಣ್ಣ ರೈಗಳ ಹೆಸರನ್ನು ಕೈಬಿಡಲಾಗಿದೆ. ಅದರ ಬದಲಿಗೆ ಏಕೀಕರಣ ಹೋರಾಟದಲ್ಲಿ ಭಾಗವಹಿಸದ ಮಂಜೇಶ್ವರ ಗೋವಿಂದ ಪೈಗಳ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ಕರ್ನಾಟಕ ಏಕೀಕರಣದ ಹೋರಾಟದ ವಿಚಾರದಲ್ಲಿ ಕಯ್ಯಾರ ಕಿಂಞಣ್ಣ ರೈಗಳು ತಮ್ಮ ಕೊನೆಯ ಉಸಿರಿನವರೆಗೆ ತೊಡಗಿಸಿಕೊಂಡವರು‌. ಆದರೆ ಪಠ್ಯದಲ್ಲಿ ಕಯ್ಯಾರರ ಹೆಸರನ್ನು ನಮೂದಿಸದೆ ಗೋವಿಂದ ಪೈಗಳ ಹೆಸರನ್ನು ಸೇರ್ಪಡೆಗೊಳಿಸಿರುವುದು ವಿಪರ್ಯಾಸವೇ ಸರಿ.

ಇದೀಗ ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಮುಖಂಡ ಮಿಥುನ್ ರೈ ಈ ಬಗ್ಗೆ ಕಿಡಿಕಾರಿದ್ದಾರೆ. ನಾಡೋಜ ಕಯ್ಯಾರ ಕಿಂಞಣ್ಣ ರೈ, ನಾರಾಯಣ ಗುರುಗಳಂತವರ ಹೆಸರುಗಳನ್ನು ಪಠ್ಯದಿಂದ ಕೈಬಿಡಬಹುದು. ಆದರೆ ಇವರನ್ನು ತುಳುನಾಡಿನವರ ಮನಸ್ಸಿನಿಂದ ಕೈಬಿಡಲು ಸಾಧ್ಯವಿಲ್ಲ. ಇನ್ನಾದರೂ ಇವರ ಹೆಸರನ್ನು ಹಾಕದಿದ್ದರೆ ಮನೆಮನೆಗೆ ಹೋಗಿ ಬಿಜೆಪಿಯವರ ಕರ್ಮಕಾಂಡವನ್ನು ಬಯಲಿಗೆಳೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By :
PublicNext

PublicNext

25/06/2022 09:02 pm

Cinque Terre

58.26 K

Cinque Terre

2

ಸಂಬಂಧಿತ ಸುದ್ದಿ