ಧರ್ಮಸ್ಥಳ: ಕರ್ನಾಟಕ ಆ್ಯಂಟಿ ಕರಪ್ಶನ್ ಮತ್ತು ವಿಜಿಲೆನ್ಸ್ ನ ರಾಜ್ಯ ಉಪಾಧ್ಯಕ್ಷ ಮಂಜುನಾಥ ರೆಡ್ಡಿ ದಂಪತಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಿದರು.
ಈ ವೇಳೆ ಮಾತನಾಡಿದ ಮಂಜುನಾಥ ರೆಡ್ಡಿ, ಕೋವಿಡ್ ಸಂದರ್ಭ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಿಂದ ಜನರಿಗೆ ಸಹಾಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ಕೋವಿಡ್ -19 ಪ್ರಶಸ್ತಿಯನ್ನು ಹೆಗ್ಗಡೆಯವರಿಗೆ ನೀಡಿದ್ದೇವೆ. ಇದು ನಮಗೆ ಬಹಳ ಸಂತೋಷದ ವಿಷಯ. ಕೋವಿಡ್ ಸಮಯದಲ್ಲಿ ಭಾರತದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಜನರಿಗೆ ಸಹಾಯಹಸ್ತ ಚಾಚಿದ ಸಂಘ- ಸಂಸ್ಥೆಗಳನ್ನು ಗೌರವಿಸಿ ನಮ್ಮ ಸಂಸ್ಥೆಯಿಂದ ಪ್ರಶಸ್ತಿ ನೀಡುತ್ತ ಬಂದಿದ್ದೇವೆ ಎಂದರು.
Kshetra Samachara
13/12/2020 12:04 pm