ಮೂವತ್ತು ವರ್ಷಗಳಿಂದ ಸಂಘ ಪರಿವಾರದಲ್ಲಿ ಕಾರ್ಯಕರ್ತನಾಗಿ ಆಜ್ರಿಯಲ್ಲಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಒಬ್ಬ ಹಿರಿಯ ಬಿಜೆಪಿ ಕಾರ್ಯಕರ್ತ. ಆಜ್ರಿ ಯಲ್ಲಿ ಬಿಜೆಪಿ ಯುವ ಪೀಳಿಗೆ ಕಟ್ಟುವಲ್ಲಿ ತನ್ನದೇ ಆದ ಪ್ರಯತ್ನಕ್ಕೆ ರಾಜು ಶೆಟ್ಟಿ ಮೊದಲಿಗರು.
ಬಿಜೆಪಿ 3ನೇ ವಾರ್ಡ್ ನಲ್ಲಿ ಜಯ ಗಳಿಸಿ ನಂತರ ಯುವ ಪೀಳಿಗೆಗೆ ಅವಕಾಶ ಕೊಡುವ ನಿಟ್ಟಿನಲ್ಲಿ ತಾನು ಹಿಂದೆ ಸರಿದು, ಯುವಕರಿಗೆ ಅವಕಾಶ ಮಾಡಿಕೊಟ್ಟ ಧೀಮಂತ ನಾಯಕ. ಶಿಕ್ಷಣ ಕ್ಷೇತ್ರದಲ್ಲಿ ಪಂಚಾಯಿತಿ ಭಾಗಗಳ ವಾರ್ಡ್ ನಲ್ಲಿ ಅಭಿವೃದ್ಧಿಯ ಕನಸು ಕಟ್ಟಿ ತನ್ನದೇ ಆದ ಶೈಲಿಯ ಅಭಿವೃದ್ಧಿಯ ಕಹಳೆ ಊದಿದ ರಾಜು ಶೆಟ್ಟಿ, ಬಿಜೆಪಿ ಪಕ್ಷದಲ್ಲಿ ಕೆಲವು ಗೊಂದಲಗಳಿಂದ ಮನ ನೊಂದು ಬಿಜೆಪಿಯ ಪಕ್ಷ ನಿಷ್ಠೆಯನ್ನು ತನ್ನೊಳಗೆ ಇಟ್ಟುಕೊಂಡು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಹಿಂದುತ್ವದ ಹರಿಕಾರನಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್ ನಿಂದ ಪಕ್ಷಕ್ಕೆ ಬರುವಂತೆ ಬಲವಾದ ಬೇಡಿಕೆ ಇದ್ದರೂ ಕೂಡ ಸಂಘ ಪರಿವಾರದಿಂದ ಬೆಳೆದುಬಂದ ರಾಜು ಶೆಟ್ಟಿ, ಒಪ್ಪದೇ ಬಿಜೆಪಿ ತತ್ವನಿಷ್ಠೆಗಳನ್ನು ಉಸಿರಾಗಿ ಇಟ್ಟುಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಆಜ್ರಿ 3ನೇ ವಾರ್ಡ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಇವರಿಗೆ ಮತದಾರರ ಪ್ರಶ್ನೆ ಏನು ?
ಪಂಚಾಯಿತಿ ಮಿನಿ ಸಮರದಲ್ಲಿ ನೀವು ಭಾಗವಹಿಸಿ, ನಿಮ್ಮ ಅಭಿವೃದ್ಧಿಯನ್ನು ಜನರ ಮುಂದೆ ಹೇಳಲು ಸಂಪರ್ಕಿಸಿ.
ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್, ಉಡುಪಿ : 9980439498.
Kshetra Samachara
12/12/2020 01:40 pm