ಉಡುಪಿ: ಶ್ರೀ ಕೃಷ್ಣಮಠದ ಮುಖ್ಯ ನಾಮಫಲಕದಲ್ಲಿಯೇ ಕನ್ನಡ ಮಾಯವಾದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ತುಳು ಇಲ್ಲಿನ ಆಡು ಭಾಷೆ ಎಂಬುದು ನಿಜ. ಆದರೆ, ನಾಮಫಲಕದಲ್ಲಿ ಕನ್ನಡ ಕಡ್ಡಾಯ ಎಂಬುದನ್ನು ಸರಕಾರವೇ ಸ್ಪಷ್ಟಪಡಿಸಿದೆ. ಕನ್ನಡದಲ್ಲಿಯೇ ಬರೆದ ಬಳಿಕ ತುಳು, ಸಂಸ್ಕೃತದಲ್ಲಿ ಬರೆಯಲಿ. ಆದರೆ, ಕನ್ನಡವನ್ನೇ ಮಾಯ ಮಾಡುವುದು ಅಪರಾಧ. ಪರ್ಯಾಯ ಅದಮಾರು ಮಠಕ್ಕೆ ಯಾರು ಈ ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ. ಮಠಮಾನ್ಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕೇ ಹೊರತು ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಎಂದು ಕೃಷ್ಣಭಕ್ತ , ಸಾಮಾಜಿಕ ಮುಂದಾಳು ವಾಸುದೇವ ಭಟ್ ಹೇಳಿದ್ದಾರೆ.
Kshetra Samachara
01/12/2020 11:54 am